ಬಳ್ಳಾರಿ: ತಾಲ್ಲೂಕಿನ ಜೋಳದರಾಶಿ ಗ್ರಾಮೀಣ ಪ್ರದೇಶದಲ್ಲಿ 2 ಪ್ಯಾರಾ (ಸ್ಪೆಷಲ್ ಫೋರ್ಸಸ್) (ಸೇನೆ ಪಡೆ) ಅವರು ಸುಮಾರು 10 ಸಾವಿರ ಅಡಿಯಿಂದ ಪ್ಯಾರಾಚೂಟ್‍ನಿಂದ ಹಾರುವ ತರಬೇತಿಯನ್ನು ಹಮ್ಮಿಕೊಂಡಿರುವುದರಿಂದ, ಸುತ್ತಮುತ್ತಲಿನ ಪ್ರದೇಶವನ್ನು ವಿದ್ಯುತ್ ಮುಕ್ತ ಪ್ರದೇಶವನ್ನಾಗಿ ಮಾಡಿಕೊಡಲು ಮನವಿ ಮಾಡಿದ್ದು ಮತ್ತು ಎಫ್-4 ಎಟಿಪಿಎಸ್ ಮಾರ್ಗದಲ್ಲಿ ಎಲ್.ಟಿ ವಾಹಕ ಬದಲಾವಣೆ ಕಾಮಗಾರಿ ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.14 ಮತ್ತು 15 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನಬಾಬು ತಿಳಿಸಿದ್ದಾರೆ.
110/11ಕೆ.ವಿ ಮೀನಹಳ್ಳಿ ಉಪ-ಕೆಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-4 ಎಟಿಪಿಎಸ್ ಮಾರ್ಗ ಮತ್ತು ಎಫ್-5 ಹಗರಿ ಕೃಷಿ ಪಂಪ್‍ಸೆಟ್ ಮಾರ್ಗಗಳ ಪಿಡಿ ಹಳ್ಳಿ, ಲಿಂಗದೇವನಹಳ್ಳಿ, ವೈ.ಕಗ್ಗಲ್, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.