Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `ಪಂಜಾಬ್ ನ್ಯಾಷನಲ್ ಬ್ಯಾಂಕ್‌’ನಲ್ಲಿ 5138 ಹುದ್ದೆಗಳಿಗೆ ಅರ್ಜಿ ಆಹ್ವಾನ.!

08/02/2026 12:40 PM

Shocking: 20 ರೂಪಾಯಿ ಲಂಚದ ಕೇಸ್, 30 ವರ್ಷ ಜೈಲು: ‘ನಿರಪರಾಧಿ’ ಎಂಬ ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!

08/02/2026 12:33 PM

ಟಿ20 ವರ್ಲ್ಡ್ ಕಪ್ ವೇಳೆ ಮುಕೇಶ್ ಅಂಬಾನಿ ಕೊಟ್ಟ ಟೀ ನಿರಾಕರಿಸಿದ ರೋಹಿತ್ ಶರ್ಮಾ!

08/02/2026 12:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್
KARNATAKA

ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ: ಡಿಸಿಎಂ ಡಿ.ಕೆ. ಶಿವಕುಮಾರ್

By kannadanewsnow0919/02/2025 2:01 PM

ರಾಜಸ್ಥಾನ :”ಕೇಂದ್ರ ಜಲಶಕ್ತಿ ಸಚಿವರು ಇದೇ ಫೆ. 25ರಂದು ಭೇಟಿಗೆ ಸಮಯಾವಕಾಶ ನೀಡಿದ್ದು, ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತೇನೆ. ನಮ್ಮ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡುವ ವಿಶ್ವಾಸವಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಕೇಂದ್ರ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು” ಎಂದು ತಿಳಿಸಿದರು.

“ಈ ಸಮ್ಮೇಳನ ಎಲ್ಲಾ ರಾಜ್ಯಗಳ ಸಚಿವರುಗಳನ್ನು ಒಗಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗುತ್ತಿದೆ. ಇದರ ಜತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು” ಎಂದು ತಿಳಿಸಿದರು.

“ಈ ಸಮ್ಮೇಳನದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಸಚಿವರುಗಳ ಜತೆ ಚರ್ಚೆ ಮಾಡಿದ್ದು, ತುಂಗಭದ್ರಾ ನದಿಯ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುತ್ತೇನೆ. ಇದಕ್ಕಾಗಿ ಮೂರು ರಾಜ್ಯಗಳ ಸೇರಿ ಕಾರ್ಯತಂತ್ರ ರೂಪಿಸಬೇಕಿದೆ” ಎಂದರು.

“ನೀರಾವರಿಯು ದೇಶದ ಪ್ರಮುಖ ಕ್ಷೇತ್ರವಾಗಿದ್ದು, ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು” ಎಂದು ಅಭಿಪ್ರಾಯಪಟ್ಟರು.

ಪ್ರಯಾಗರಾಜ್ ಸಂಗಮದ ನೀರು ಸ್ನಾನಕ್ಕೆ ಯೋಗ್ಯವಲ್ಲ ಎಂಬ ವರದಿ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

BREAKING:ಪರ್ವೇಶ್ ವರ್ಮಾ ದೆಹಲಿ ಸಿಎಂ ಆಗ್ತಾರಾ? ಬಿಜೆಪಿ ಅಭ್ಯರ್ಥಿ ಯಾರು | Delhi CM Announcement

BREAKING NEWS : ‘ಅನ್ನಭಾಗ್ಯ’ ಫಲಾನುಭವಿಗಳಿಗೆ ಹಣದ ಬದಲು ಅಕ್ಕಿ ಕೊಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ

Share. Facebook Twitter LinkedIn WhatsApp Email

Related Posts

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `ಪಂಜಾಬ್ ನ್ಯಾಷನಲ್ ಬ್ಯಾಂಕ್‌’ನಲ್ಲಿ 5138 ಹುದ್ದೆಗಳಿಗೆ ಅರ್ಜಿ ಆಹ್ವಾನ.!

08/02/2026 12:40 PM2 Mins Read

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM3 Mins Read

ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ 3 ತಿಂಗಳಿಗೊಮ್ಮೆ `ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ’ ಕಡ್ಡಾಯ.!

08/02/2026 12:21 PM2 Mins Read
Recent News

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `ಪಂಜಾಬ್ ನ್ಯಾಷನಲ್ ಬ್ಯಾಂಕ್‌’ನಲ್ಲಿ 5138 ಹುದ್ದೆಗಳಿಗೆ ಅರ್ಜಿ ಆಹ್ವಾನ.!

08/02/2026 12:40 PM

Shocking: 20 ರೂಪಾಯಿ ಲಂಚದ ಕೇಸ್, 30 ವರ್ಷ ಜೈಲು: ‘ನಿರಪರಾಧಿ’ ಎಂಬ ತೀರ್ಪು ಬಂದ ಮರುದಿನವೇ ವ್ಯಕ್ತಿ ಸಾವು!

08/02/2026 12:33 PM

ಟಿ20 ವರ್ಲ್ಡ್ ಕಪ್ ವೇಳೆ ಮುಕೇಶ್ ಅಂಬಾನಿ ಕೊಟ್ಟ ಟೀ ನಿರಾಕರಿಸಿದ ರೋಹಿತ್ ಶರ್ಮಾ!

08/02/2026 12:27 PM

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM
State News
KARNATAKA

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `ಪಂಜಾಬ್ ನ್ಯಾಷನಲ್ ಬ್ಯಾಂಕ್‌’ನಲ್ಲಿ 5138 ಹುದ್ದೆಗಳಿಗೆ ಅರ್ಜಿ ಆಹ್ವಾನ.!

By kannadanewsnow5708/02/2026 12:40 PM KARNATAKA 2 Mins Read

ಪಂಜಾಬ್ ನ್ಯಾಷನಲ್ ಬ್ಯಾಂಕ್ 5,138 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಯಾವುದೇ ಪದವಿ ಅರ್ಹತೆ ಹೊಂದಿರುವವರು ಫೆಬ್ರವರಿ 24…

ಕರ್ನಾಟಕದ `MLA-MLC’ ಗಳು ತಮ್ಮ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳು ಯಾವು ಗೊತ್ತಾ? ಇಲ್ಲಿದೆ ಸಂಪೂರ್ಣ ಪಟ್ಟಿ

08/02/2026 12:25 PM

ರಾಜ್ಯದ ಎಲ್ಲಾ ವಸತಿ ನಿಲಯಗಳಲ್ಲಿ 3 ತಿಂಗಳಿಗೊಮ್ಮೆ `ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ’ ಕಡ್ಡಾಯ.!

08/02/2026 12:21 PM

BREAKING : `ನಮ್ಮ ಮೆಟ್ರೋ’ ಪ್ರಯಾಣಿಕರ ಜೊತೆಯ ಸಂವಾದ : `Mr. CM CUT THE DRAMA’ ಟೀ ಶರ್ಟ್ ಧರಿಸಿ ಬಂದ ಸಂಸದ ತೇಜಸ್ವಿ ಸೂರ್ಯ.!

08/02/2026 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.