ರಾಯಚೂರು: ಖಾಸಗಿ ಶಾಲೆಯೊಂದರ ನವೀಕರಣದ ಕೆಲಸಕ್ಕಾಗಿ ಲಂಚ ಸ್ವೀಕರಿಸುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ (DDPI) ಪ್ರಥಮ ದರ್ಜೆ ಸಹಾಯಕರೊಬ್ಬರು (FDA) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ರಾಯಚೂರಿನ ಹೊಸ ಜಿಲ್ಲಾಧಿಕಾರಿ (DC) ಕಚೇರಿ ಸಂಕೀರ್ಣದಲ್ಲಿರುವ ಡಿಡಿಪಿಐ ಕಚೇರಿಯಲ್ಲೇ ಈ ದಾಳಿ ನಡೆದಿದ್ದು, ಎಫ್‌ಡಿಎ ಮಹಾಬಲೇಶ್ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ.
ಘಟನೆಯ ವಿವರ: ಖಾಸಗಿ ಶಾಲೆಯ ನವೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ದೂರುದಾರರಾದ ಸಿದ್ದಣ್ಣ ಎಂಬುವವರ ಬಳಿ ಎಫ್‌ಡಿಎ ಮಹಾಬಲೇಶ್ ಒಟ್ಟು 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಸಿದ್ದಣ್ಣ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ, ಇಂದು ಡಿಡಿಪಿಐ ಕಚೇರಿಯಲ್ಲಿ ದೂರುದಾರರಿಂದ ಮುಂಗಡವಾಗಿ 15,000 ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಮಹಾಬಲೇಶ್‌ನನ್ನು ನಗದು ಸಮೇತ ವಶಕ್ಕೆ ಪಡೆದಿದ್ದಾರೆ.
ಸದ್ಯ ಲೋಕಾಯುಕ್ತ ಪೊಲೀಸರು ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕಚೇರಿಯಲ್ಲೇ ನಡೆದ ಈ ಕಾರ್ಯಾಚರಣೆ ಸರ್ಕಾರಿ ವಲಯದಲ್ಲಿ ತಲ್ಲಣ ಮೂಡಿಸಿದೆ.
BREAKING: ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಮಧ್ಯಾಹ್ನ 1 ಗಂಟೆಯವರೆಗೆ ಶೇ.95.50ರಷ್ಟು ಮತದಾನ!








