ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬೆನ್ನಲ್ಲೇ ಮಂಗಳೂರಿನ ಸುರತ್ಕಲ್ ಬಳಿ ಫಾಜಿಲ್ ಎಂಬ ವ್ಯಕ್ತಿಯ ಬರ್ಬರ ಹತ್ಯೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಪಾಕಿಸ್ತಾನದಲ್ಲಿ ಭಾರೀ ಮಳೆ: ಛಾವಣಿ ಕುಸಿದು 6 ಮಂದಿ ಸಾವು, 18 ಮಂದಿಗೆ ಗಾಯ
ಮಂಗಳೂರಿನ ಸುರತ್ಕಲ್ ಫಾಜಿಲ್ ಹತ್ಯೆ ಹಿನ್ನೆಲೆ ಮಂಗಳೂರಿನ ಸುರತ್ಕಲ್ನಲ್ಲಿ ಹೈಅಲರ್ಟ್ ಇದೆ. ದಕ್ಷಿಣಕನ್ನಡ 4 ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಸುರತ್ಕಲ್, ಪೆಣಂಬೂರ್, ಮುಲ್ಕಿ, ಬಜಪೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಪೊಲೀಸ್ ಕಮಿಷನರ್ ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಪಾಕಿಸ್ತಾನದಲ್ಲಿ ಭಾರೀ ಮಳೆ: ಛಾವಣಿ ಕುಸಿದು 6 ಮಂದಿ ಸಾವು, 18 ಮಂದಿಗೆ ಗಾಯ
ನಿಷೇಧಾಜ್ಞೆ ಇರುವ ಕಡೆ ಮಸೀದಿಗಳಲ್ಲಿ ಇಂದು ಶುಕ್ರವಾರ ನಮಾಜ್ ಮಾಡದಂತೆ ಖಾಕಿ ಮನವಿ ಮಾಡಿದ್ದಾರೆ. ನಾಲ್ಕು ಕಡೆ ಶಾಲಾ ಕಾಲೇಜುಗಳಿಗೂ ರಜೆಯನ್ನು ಘೋಷಣೆ ಮಾಡಲಾಗಿದೆ.