ಛತ್ತರ್ಪುರ: ಮಧ್ಯಪ್ರದೇಶದಲ್ಲಿ ಆರೋಗ್ಯ ಸೇವೆಗಳು ಹೇಗೆ ಹದಗೆಟ್ಟಿವೆ ಎನ್ನುವ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು, ಈ ನಡುವೆ ಇತ್ತೀಚೆಗೆ, ಛತ್ತರ್ಪುರದಲ್ಲಿ ಇದೇ ರೀತಿಯ ಪ್ರಕರಣವೊಂದು ವರದಿಯಾಗಿದೆ. ಬಾಲಕಿಯ ಶವವನ್ನು ಸಾಗಿಸಲು ಹಿಯರ್ಸೆ ವ್ಯಾನ್ ಸಿಗದ ಕಾರಣ. ವ್ಯಕ್ತಿಯೊಬ್ಬ ತನ್ನ ತಂಗಿ ಮಗಳ ಶವನ್ನು ತನ್ನ ಭುಜದಲ್ಲಿ ಇಟ್ಟುಕೊಂಡು ಎರಡು ಗಂಟೆಗಳ ಕಾಲ ಅಲೆದಾಡಿದನು ಹೇಗೋ ಮಗಳ ಶವವನ್ನು ಬಸ್ಸಿನಲ್ಲಿ ಹಳ್ಳಿಗೆ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಸ್ಥಳೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, 4 ವರ್ಷದ ಪ್ರೀತಿ ಬುಧವಾರ ಬೆಳಿಗ್ಗೆ ಜಿಲ್ಲೆಯ ಬಜ್ನಾ ಪೊಲೀಸ್ ಠಾಣೆ ಪ್ರದೇಶದ ಪಟಾನ್ ಗ್ರಾಮದ ನದಿಯ ಬಳಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ, ಬಾಲಕಿ ಮಣ್ಣಿನಲ್ಲಿ ಹೂತುಹೋದ ನಂತರ ಸಾವನ್ನಪ್ಪಿದಳು ಎನ್ನಲಾಗಿದೆ. ಈ ವೇಳೆ , ಬಾಲಕಿಯ ಸೋದರಮಾವ ನದಿಯಲ್ಲಿ ಸ್ನಾನ ಮಾಡುತ್ತಿದ್ದರು, ತಕ್ಷಣವೇ ಬಾಲಕಿಯನ್ನು ಮಣ್ಣಿನಿಂದ ಹೊರತೆಗೆಯಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿದ ಆಕೆಯನ್ನು ಹತ್ತಿರದ ಬಿಜಾವರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಾಲಕಿಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅವಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಬಾಲಕಿ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಳು ಎನ್ನಲಾಗಿದೆ.
ಸೋದರ ಸೊಸೆಯ ಮರಣದ ನಂತರ, ಅವಳ ಸೋದರಮಾವ ಆದರೆ ಶವವನ್ನು ಮನೆಗೆ ಕೊಂಡೊಯ್ಯಲು ವ್ಯಾನ್ ಸಿಗಲಿಲ್ಲ ಎನ್ನಲಾಗಿದೆ. ಇದೇ ವೇಳೇ ಬಾಲಕಿಯ ಸೋದರಮಾವ ಶವದೊಂದಿಗೆ ಉಚಿತ ವಾಹನವನ್ನು ಹುಡುಕಲು ಸಮರ್ಪಣ್ ಕ್ಲಬ್ ಗೆ ಹೋದರು ಆದರೆ ಅಲ್ಲಿ ಕೂಡ ವ್ಯಾನ್ ಸಿಕ್ಕಿಲ್ಲ, ಈ ನಡುವೆ ಸೋದರ ಮಾವ ತನ್ನ ಸೊಸೆಯ ದೇಹವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಕಾಲ್ನಡಿಗೆಯಲ್ಲಿ ಹೊರಟು ಛೇದಕದಿಂದ ಹಳೆಯ ಬಿಜಾವರ್ ನಾಕಾಕ್ಕೆ ಟ್ಯಾಕ್ಸಿಯನ್ನು ಹೋಗಿದ್ದಾನೆ, ಮತ್ತೆ ಅಲ್ಲಿ ಅವನು ಬಸ್ಸಿನಲ್ಲಿ ಕುಳಿತು ಹುಡುಗಿಯ ಶವದೊಂದಿಗೆ ತನ್ನ ಹಳ್ಳಿಗೆ ಹೊರಟನು ಎನ್ನಲಾಗಿದೆ. ಈ ಹಿಂದೆ ಸ್ಥಳೀಯ ಶಾಸಕರು ವಾಹನವನ್ನು ನೀಡಿದ್ದರೂ, ಇಲ್ಲಿನ ಅಗತ್ಯವಿರುವ ಜನರಿಗೆ ಸಮಯಕ್ಕೆ ಸರಿಯಾಗಿ ವಾಹನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಇಂತಹ ಪ್ರಕರಣಗಳು ಬಂದಿವೆ, ಆದರೆ ಜನಪ್ರತಿನಿಧಿಗಳು ಅದರ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ.