ನವದೆಹಲಿ: ಉತ್ತರ ಪ್ರದೇಶದಲ್ಲಿ ವರನಿಗೆ ವಧುವಿನ ಕುಟುಂಬವು ಬುಲ್ಡೋಜರ್ ಅನ್ನು ಉಡುಗೊರೆಯಾಗಿ ನೀಡಿರುವ ಬುಲ್ಡೋಜರ್ನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ಆಗಿರೋವ ಫೋಟೋದಲ್ಲಿ “ಯುಪಿ ಮೆ ಬುಲ್ಡೋಜರ್ ಕಿ ಧೂಮ್. ಹಮೀರ್ಪುರ್ ಕಿ ಏಕ್ ಶಾದಿ ಮೇ ಉಪರ್ ಸ್ವರೂಪ್ ದುಲ್ಹಾ ಯೋಗೇಂದ್ರ ಕೋ ಬುಲ್ಡೋಜರ್ ಮಿಲಾ ಹೈ” ಎಂದು ಫೋಟೋಗಳಿಗೆ ಶೀರ್ಷಿಕೆ ನೀಡಲಾಗಿದೆ. ವಧುವಿನ ತಂದೆ ಬುಲ್ಡೋಜರ್ ತನ್ನ ಮಗಳಿಗೆ ಹಣವನ್ನು ಸಂಪಾದಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
“ಕಾರ್ ದೇಟಾ ಟು ಖಾದಿ ರೆಹ್ತಿ, ಬುಲ್ಡೋಜರ್ ಕರೇಗಾ ಕಾಮ್, ಮೇರಿ ಬಿಟಿಯಾ ಪಾಯೇಗಿ ದಾಮ್ (ನಾನು ಕಾರನ್ನು ಉಡುಗೊರೆಯಾಗಿ ನೀಡಿದ್ದರೆ, ಅದನ್ನು ನಿಲ್ಲಿಸಲಾಗುತ್ತಿತ್ತು. ಬುಲ್ಡೋಜರ್ ಕೆಲಸ ಮಾಡುತ್ತದೆ, ಆ ಮೂಲಕ ನನ್ನ ಮಗಳು ಸಂಪಾದಿಸುತ್ತಾಳೆ) “ಎಂದು ವಧುವಿನ ತಂದೆ ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
यूपी में #बुलडोजर_मॉडल की धूम
हमीरपुर की एक शादी में उपहार स्वरूप दूल्हा योगेंद्र को बुलडोजर मिला है..
लड़की का पिता बोला कार देते तो खड़ी रहती, बुलडोजर करेगा काम, मेरी बिटिया पायेगी दाम-https://t.co/VWbgectOCK… pic.twitter.com/y9YeZIG68Q
— Kuldeep Bhardwaj 🇮🇳 (@KuldeepSharmaUP) December 17, 2022