ಸಬರ್ಕಾಂತ : ಅಪರಿಚಿತ ವ್ಯಕ್ತಿಯೊಬ್ಬ ವಿತರಿಸಿದ ಎಲೆಕ್ಟ್ರಾನಿಕ್ ವಸ್ತು ಸ್ಫೋಟಗೊಂಡ ಪರಿಣಾಮ ತಂದೆ-ಮಗಳು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ಸಬರ್ಕಾಂತ ಜಿಲ್ಲೆಯಲ್ಲಿ ಗುರುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೇದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವಡಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಜಿತೇಂದ್ರ ರಬಾರಿ ತಿಳಿಸಿದ್ದಾರೆ.
“ಪಾರ್ಸೆಲ್’ನ್ನ ಅಪರಿಚಿತ ವ್ಯಕ್ತಿಯೊಬ್ಬರು ತಲುಪಿಸಿದ್ದಾರೆ. ಎಲೆಕ್ಟ್ರಾನಿಕ್ ವಸ್ತುವನ್ನ ಪ್ಲಗ್ ಇನ್ ಮಾಡಿದ ಕೂಡಲೇ ಸ್ಫೋಟ ಸಂಭವಿಸಿದೆ” ಎಂದು ಅವರು ಹೇಳಿದರು.
ಜಿತು ವಂಝಾರಾ (33) ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮೂವರು ಬಾಲಕಿಯರನ್ನ ವಡಾಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಅಲ್ಲಿಂದ ಹಿಮತ್ನಗರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ವಂಝಾರಾ ಅವರ 11 ವರ್ಷದ ಮಗಳು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಆಕೆಯ ಸಹೋದರಿ ಮತ್ತು ಸೋದರಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಾಯಗೊಂಡ ಬಾಲಕಿಯರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಸಹಾಯಕ ಸ್ಥಾನಿಕ ವೈದ್ಯಕೀಯ ಅಧಿಕಾರಿ ವಿಪುಲ್ ಜಾನಿ ತಿಳಿಸಿದ್ದಾರೆ.
ಪಾರ್ಸೆಲ್ ಆಟೋರಿಕ್ಷಾದಲ್ಲಿ ತಲುಪಿಸಲಾಗಿದೆ ಎಂದು ಸಂತ್ರಸ್ತರ ಸಂಬಂಧಿಕರು ತಿಳಿಸಿದ್ದಾರೆ. ಕುಟುಂಬವು ವಸ್ತುವನ್ನ ಆರ್ಡರ್ ಮಾಡಿದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಬಾರಿ ಹೇಳಿದರು.
ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್ ; ಕರೆ ಮಾಡಿದವರ ‘ಹೆಸರು’ ಪ್ರದರ್ಶನಕ್ಕೆ ಟೆಲಿಕಾಂ ಕಂಪನಿಗಳಿಗೆ ‘TRAI’ ಸೂಚನೆ
BREAKING: ರಾಜ್ಯದಲ್ಲಿ ಬಿರು ಬಿಸಿಲಿನ ತಾಪಕ್ಕೆ ಮತ್ತೊಂದು ಬಲಿ | Heat Weather