ನವದೆಹಲಿ : ದೇಶದಾದ್ಯಂತ ರೈತರಿಗೆ ಆರ್ಥಿಕ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿರುವುದು ಗೊತ್ತೇ ಇದೆ. ಈ ಯೋಜನೆಯ ಮೂಲಕ ಪ್ರತಿ ವರ್ಷ ರೈತರಿಗೆ 6,000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗ್ತಿದೆ. ಆದರೆ ಈ ಹಣ ಒಂದೇ ಬಾರಿ ಪಾವತಿಯಾಗದೆ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತೆ. ಮೂರು ಕಂತುಗಳಂತೆ, ಪ್ರತಿ ಕಂತಿನಲ್ಲಿ 2000 ರೂಪಾಯಿ ಒದಗಿಸುತ್ತದೆ. ಆದ್ರೆ, ಇದುವರೆಗೆ ಕೇಂದ್ರವು 11 ಕಂತುಗಳ ಹಣವನ್ನ ರೈತರ ಖಾತೆಗೆ ಜಮಾ ಮಾಡಿದೆ. ಇದೀಗ 12ನೇ ಕಂತಿನ ಹಣ ಬಿಡುಗಡೆಯಾಗಬೇಕಿದೆ. ಈ ಹಿಂದೆ ಕೇಂದ್ರೆ ಸರ್ಕಾರ ಸೆಪ್ಟಂಬರ್ 30ರ ವೇಳೆಗೆ ಹಣ ಬಿಡುಗಡೆ ಮಾಡುತ್ತೆ ಎಂದು ವರದಿಯಾಗಿತ್ತು. ಆದ್ರೆ, ಇದುವರೆಗೂ ಕತಿನ ಹಣ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರವೇನು ಅನ್ನೋ ಮಾಹಿತಿ ಮುಂದಿದೆ.
PM ಕಿಸಾನ್ 12ನೇ ಕಂತಿನ ಹಣವನ್ನ ಪಡೆಯಲು ರೈತರು ಮೊದಲು eKYC ಅನ್ನು ಪೂರ್ಣಗೊಳಿಸಬೇಕು. ಆದ್ರೆ, ಇನ್ನು ಅದೆಷ್ಟೋ ರೈತರು ಇಕೆವೈಸಿ ಪೂರ್ಣಗೊಳಿಸಿಲ್ಲ. ಅದ್ರಂತೆ, ಕೆವೈಸಿ ರೈತರಿಗೆ ಈ ಹಣ ಸಿಗುವುದಿಲ್ಲ. ಹಾಗಾಗಿ ಸರ್ಕಾರ ಇಂತಹ ರೈತರಿಗೆ ಸರ್ಕಾರ ಸಮಯ ನೀಡಿದ್ದು, ಅವ್ರು ಕೆವೈಸಿ ಪೂರ್ಣಗೊಳಿಸುವುದಕ್ಕಾಗಿ ಕಾಯುತ್ತಿದೆ ಎಂದು ವರದಿಯಾಗಿದೆ. ಹಾಗಾಗಿ ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿಸಿದ ರೈತರು ಕಡ್ಡಾಯವಾಗಿ ಇಕೆವೈಸಿಗೆ ಒಳಗಾಗಬೇಕು. PM ಕಿಸಾನ್ ಪೋರ್ಟಲ್ನಲ್ಲಿ OTP ಆಧಾರಿತ eKYC ಲಭ್ಯವಿದೆ. ಅಥವಾ ಬಯೋಮೆಟ್ರಿಕ್ ಆಧಾರಿತ eKYC ಅನ್ನು ಪೂರ್ಣಗೊಳಿಸಲು ನಿಮ್ಮ ಹತ್ತಿರದ CSC ಕೇಂದ್ರಗಳನ್ನು ನೀವು ಸಂಪರ್ಕಿಸಬಹುದು.
ಆನ್ಲೈನ್ನಲ್ಲಿ ಇ-ಕೆವೈಸಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೋದು.!
- ಮೊದಲ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಲಾಗಿನ್ ಆಗಿ
- ಅದರ ನಂತರ ಬಲಭಾಗದಲ್ಲಿರುವ eKYC ಆಯ್ಕೆಯನ್ನು ಆರಿಸಿ.
- ನಂತರ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಹುಡುಕಾಟದ ಮೇಲೆ ಕ್ಲಿಕ್ ಮಾಡಿ.
- ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಯನ್ನು ನಮೂದಿಸಿ.
- Get OTP ಮೇಲೆ ಕ್ಲಿಕ್ ಮಾಡಿ ಮತ್ತು OTP ನಮೂದಿಸಿ.
- ನಿಮ್ಮ ಎಲ್ಲಾ ಡೇಟಾ ಸರಿಯಾಗಿ ಹೊಂದಾಣಿಕೆಯಾದರೆ ನಿಮ್ಮ eKYC ಯಶಸ್ವಿಯಾಗುವುದು. ಇಲ್ಲದಿದ್ದರೆ ತಿರಸ್ಕರಿಸಲಾಗುವುದು.
- ಫಲಾನುಭವಿಗಳು ತಪ್ಪು ಘೋಷಣೆ ಮಾಡಿದ್ರೆ, ಅಲ್ಲಿಯವರೆಗೆ ಪಡೆದ ಪಿಎಂ ಕಿಸಾನ್ ಹಣವನ್ನ ಹಿಂಪಡೆಯಲಾಗುತ್ತದೆ.
ಬ್ಯಾಲೆನ್ಸ್ ಪರಿಶೀಲಿಸಲು ಕ್ರಮಗಳು.!
- ಮೊದಲ ಪಿಎಂ ಕಿಸಾನ್ಅಧಿಕೃತ ವೆಬ್ಸೈಟ್ ಲಾಗಿನ್ ಆಗಿ
- ನಂತರ ಫಾರ್ಮರ್ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
- ನಂತರ ಫಲಾನುಭವಿ ಸ್ಥಿತಿಯನ್ನ ಆಯ್ಕೆ ಮಾಡಿ. ಇಲ್ಲಿ ಫಲಾನುಭವಿಯು ಅರ್ಜಿಯ ಸ್ಥಿತಿಯನ್ನ ಪರಿಶೀಲಿಸಬಹುದು.
- ಪಟ್ಟಿಯು ರೈತನ ಹೆಸರನ್ನ ತೋರಿಸುತ್ತದೆ, ಅವನ ಬ್ಯಾಂಕ್ ಖಾತೆಯಲ್ಲಿರುವ ನಗದು ಸಹಿತ.
- ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನ ನಮೂದಿಸಿ.
- ಅದರ ನಂತರ Get Date (Get Data) ಮೇಲೆ ಕ್ಲಿಕ್ ಮಾಡಿ.