ಶಿವಮೊಗ್ಗ: ಜಿಲ್ಲೆಯಲ್ಲಿ ಬೇಸಿಗೆ ಆರಂಭದಲ್ಲೇ ರೈತರಿಗೆ ಅಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ನಾಳೆ ಸಾಗರದ ಅವಿನಹಳ್ಳಿಯ ಮೆಸ್ಕಾಂ ಕಚೇರಿಯ ಮುಂದೆ ರೈತರಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಕುರಿತಂತೆ ಲೋಕೇಶ್ ಹುಣಾಲುಮಡಿಕೆ ಅವರು ಮಾಹಿತಿ ಹಂಚಿಕೊಂಡಿದ್ದು, ಸಾಗರ ತಾಲ್ಲೂಕಿನ ಆವಿನಹಳ್ಳಿ ಮತ್ತು ಕೋಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ನೀಡದಿರುವ ಬಗ್ಗೆ ಹಾಗೂ ಪವರ್ ಕಟ್ ವಿರೋದಿಸಿ ದಿನಾಂಕ 24-02-2025ರ ಸೋಮವಾರ ಬೆಳಗ್ಗೆ 11ಗಂಟೆಗೆ ಆವಿನಹಳ್ಳಿ ಮೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಆವಿನಹಳ್ಳಿ ಮೆಸ್ಕಾಂ ಕಚೇರಿ ಬಳಿಗೆ ರೈತರು ಗ್ರಾಮಸ್ಥರು ವ್ಯಾಪಾರಸ್ಥರು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಕೇಸ್: ಮತ್ತೆ ಆರು ಆರೋಪಿಗಳು ಅರೆಸ್ಟ್
Watch Video: ಹಮಾಸ್ ಸೈನಿಕನ ಹಣೆಗೆ ಮುತ್ತಿಟ್ಟ ಬಿಡುಗಡೆಗೊಂಡ ಇಸ್ರೇಲಿ ಒತ್ತೆಯಾಳು | Israel-Hamas war