ಚಿತ್ರದುರ್ಗ : ಚಿತ್ರದುರ್ಗ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೃಷಿ ನೀರಾವರಿ ಪಂಪ್‍ಸೆಟ್ ಬಳಕೆದಾರರು ತಮ್ಮ ನೀರಾವರಿ ಪಂಪ್‍ಸೆಟ್‍ನ ವಿದ್ಯುತ್ ಆರ್.ಆರ್.ಸಂಖ್ಯೆಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಹಾಲಿ ಇರುವ ಕೃಷಿ ಪಂಪ್‍ಸೆಟ್‍ನ ವಾರಸುದಾರರು ಮರಣ ಹೊಂದಿದ್ದಲ್ಲಿ ಪ್ರಸ್ತುತ ಪಹಣಿಯಲ್ಲಿರುವ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ, ಹಿಂದಿನ ವಾರಸುದಾರರ ಮರಣ ಪ್ರಮಾಣ ಪತ್ರ, ಛಾಪಾಕಾಗದ ಹಾಗೂ ಪಹಣಿಯಲ್ಲಿ ಜಂಟಿ ಖಾತೆಯಾಗಿದ್ದರೆ ಉಳಿದವರ ಒಪ್ಪಿಗೆ ಪತ್ರ, ಕ್ರಯಪತ್ರದ ದಾಖಲೆಯನ್ನು ಸಮೀಪದ ಬೆಸ್ಕಾಂ ಶಾಖಾ ಕಚೇರಿ ಅಥವಾ ಸಂಬಂಧಿಸಿದ ಪವರ್ ಮ್ಯಾನ್ ಅಥವಾ ಮೀಟರ್ ರೀಡರ್‍ಗಳಿಗೆ ಸಲ್ಲಿಸಿ ಹಾಲಿ ಆರ್.ಆರ್.ಸಂಖ್ಯೆಯಲ್ಲಿರುವ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳಬೇಕು ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.\
BREAKING: ಭಾರೀ ಮಳೆ ಹಿನ್ನಲೆ: ನಾಳೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ‘ಶಾಲಾ-ಕಾಲೇಜು’ಗಳಿಗೆ ರಜೆ: DC ಆದೇಶ