ಶಿವಮೊಗ್ಗ : ಭದ್ರಾ ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಫೆಬ್ರವರಿ ಒಂದರಿಂದ ನೀರು ಹರಿಸುವಂತೆ ರೈತರು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲಿ ಇಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ದಾವಣಗೆರೆಯ ನೀರಾವರಿ ಇಲಾಖೆಯಲ್ಲಿ ರೈತರು ಸಭೆ ನಡೆಸಿದ್ದು ಫೆಬ್ರವರಿ ಮಾರ್ಚ್ ಎಪ್ರಿನಲ್ಲಿ ತಲಾ 20 ದಿನ ನೀರು ಹರಿಸುವಂತೆ ಅಗ್ರಹಿಸಿದ್ದಾರೆ.
ಆದ್ದರಿಂದ ಇಂದು ಶಿವಮೊಗ್ಗದಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 20 ದಿನಗಳವರೆಗೆ ನೀರು ಹರಿಸುವ ಈ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದು, ಒಂದು ವೇಳೆ ನೀರು ಹರಿಸುವುದನ್ನು ತಪ್ಪಿಸಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.