ನವದೆಹಲಿ : ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ 12 ಬೇಡಿಕೆ ಮುಂದಿಟ್ಟು ರೈತ ಸಂಘಟನೆಗಳು ಕೈಗೊಂಡಿರುವ ‘ದಿಲ್ಲಿ ಚೊಲೋ 2.0 ‘ ಹೋರಾಟ ಈಗಾಗಲೇ ಐದನೇ ದಿನ ಪೂರೈಸಿದೆ. ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಕೇಂದ್ರ ಸರ್ಕಾರ ಫೆಬ್ರವರಿ 18 ಭಾನುವಾರ ನಾಲ್ಕನೇ ಸುತ್ತಿನ ಮಾತುಕತೆ ನಡೆಸಲಿದೆ.
ಕೃಷಿಕರ ಬೇಡಿಕೆ ಕುರಿತಂತೆ ರೈತ ಸಂಘಟನೆ ಮುಖಂಡರು ಹಾಗೂ ಸರಕಾರದ ನಡುವೆ ಈ ಮಾತುಕತೆ ನಡೆಯಲಿದ್ದು, ಈ ಮಾತುಕತೆಯಾದರೂ ಫಲಪ್ರದ ಆಗಬಹುದೇ ಎಂಬ ಆಶಾಭಾವ ಮೂಡಿದೆ. ಇದುವರೆಗೂ ನಡೆದ ಮೂರು ಸುತ್ತಿನ ಮಾತುಕತೆಗಳು ಅರ್ಥ ಪೂರ್ಣವಾಗಿ ನಡೆದಿದ್ದು, ಮುಂದಿನ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕೂಡಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
BREAKING : PSI ಹಗರಣದ ತನಿಖೆ ಚುರುಕು : ಮೂವರು ಆರ್. ಡಿ ಪಾಟೀಲ್ ಸಹಚರರನ್ನು ಬಂಧಿಸಿದ CID
2020 – 2021 ರಲ್ಲಿ ಸುಮಾರು 13 ತಿಂಗಳ ಕಾಲ ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ರಸ್ತೆಗಳಲ್ಲೇ ಟೆಂಟ್‌ಗಳನ್ನು ಹಾಕಿಕೊಂಡು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಕುಳಿತಿದ್ದ ರೈತರು, 3 ಕೃಷಿ ಕಾಯ್ದೆಗಳನ್ನು ಸರ್ಕಾರ ಕೈ ಬಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆಗಲೂ ಕೂಡಾ ಕೇಂದ್ರ ಸರ್ಕಾರ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ತರುವ ಕುರಿತಾಗಿ ಭರವಸೆ ನೀಡಿತ್ತು.
ಆದರೆ, ಸರ್ಕಾರ ತಾನು ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿರುವ ರೈತ ಸಂಘಟನೆಗಳು, ಇದೀಗ ಮತ್ತೆ ಹೋರಾಟ ನಡೆಸುತ್ತಿವೆ. ಜೊತೆಯಲ್ಲೇ ತಮ್ಮ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದೆ. ಜೊತೆಯಲ್ಲೇ ಸುಮಾರು 6 ತಿಂಗಳಿಗೆ ಆಗುವಷ್ಟು ದವಸ ಧಾನ್ಯ, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಕೃಷಿಕರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ದಿಲ್ಲಿಗೆ ಆಗಮಿಸಿದ್ದಾರೆ.