ತುಮಕೂರು : ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ವಿರೋಧಪಕ್ಷದ ನಾಯಕರು ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಇದರ ಮಧ್ಯ ತುಮಕೂರಿನಲ್ಲಿ ಭ್ರಷ್ಟಾಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ರೈತ ಮೂಲಂಗಿಯನ್ನೇ ಲಂಚವಾಗಿ ಇಡುತ್ತೇನೆ ಬನ್ನಿ ಬನ್ನಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೌದು ತುಮಕೂರಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ರೈತ ಬಿ ಸತ್ತು ಹೋಗಿದ್ದಾನೆ . ಮೂಲಂಗಿಯನ್ನು ಲಂಚವಾಗಿ ನೋಡುತ್ತೇನೆ ಬನ್ನಿ ಬನ್ನಿ ಎಂದು ತಾಲೂಕು ಕಚೇರಿಯ ಬಳಿ ಮೈಕ್ ಹಿಡಿದು ರೈತ ಘೋಷಣೆ ಕೂಗಿರುವ ಘಟನೆ ನಡೆದಿದೆ ಮಧುಗಿರಿ ತಾಲೂಕಿನ ಕಚೇರಿಯಲ್ಲಿ ರೈತ ಭ್ರಷ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ.
ಅಧಿಕಾರಿಗಳಿಗೆ ದುಡ್ಡು ಕೊಡೋಕೆ ನನ್ನತ್ರ ದುಡ್ಡಿಲ್ಲ ಮೂಲಂಗಿ ಮಾರಿಕೊಂಡು ಜೀವನ ಮಾಡುತ್ತಿದ್ದಾನೆ ಅದಕ್ಕೋಸ್ಕರ ಮೂಲಂಗಿಯನ್ನೇ ಲಂಚ ಕೊಡೋಕೆ ಬಂದಿದ್ದೇನೆ ನಮ್ಮ ಅಧಿಕಾರಿಗಳಾದ ಆರ್ ಐ ಜಯಪ್ರಕಾಶ್ ನಮ್ಮ ವಿಎ ಶರಣ್ ಅಂತ ಇಬ್ಬರು ಬಂದು ದಿನವೂ ಒಂದು ಕಥೆ ಕಟ್ಟಿಕೊಂಡು ದಿನ ತಳ್ಳುತ್ತಿದ್ದಾರೆ ಏನಾದರೂ ಮಾಡಿ ಅನುಕೂಲ ಮಾಡಿಕೊಡಿ ಇಲ್ಲಾಂದ್ರೆ ಈ ವಾರದಲ್ಲಿ ಬಂದು ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ ಎಂದು ರೈತ ಪ್ರಸನ್ನ ಕುಮಾರ್ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.








