ಗದಗ: ಯಶ್ ಜನ್ಮದಿನದ ಅಂಗವಾಗಿ 20 ಅಡಿ ಬ್ಯಾನರ್ ಕಟ್ಟುವಾಗ ದಾರುಣವಾಗಿ ಸಾವನ್ನಪ್ಪಿದ ಮೂವರು ಯುವಕರ ಸಾಮೂಹಿಕ ಅಂತ್ಯಕ್ರಿಯೆ ಸೂರಣಗಿಯಲ್ಲಿ ನೇರವೇರಿದೆ. ಈ ನಡುವೆ ಸುದ್ದಿ ತಿಳಿದ ಯಶ್, ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಇಂದು ಸಂಜೆ ಭೇಟಿ ಮೃತರ ಕುಟುಂಬಕ್ಕೆ ಸಮಾಧಾನ ಮಾಡಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ನಾನು ಮೃತರ ಕುಟುಂಬದೊಂದಿಗೆ ಇದ್ದು, ಅವರನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಅಂತ ತಿಳಿಸಿದರು. ಯಾರೂ ಕೂಡ ಕಟೌಟ್ ಕಟ್ಟುವುದು, ವಾಹನಗಳ ಹಿಂದೆ ಬರುವುದು ಮಾಡಬೇಡಿ ಅಂತ ಮನವಿ ಮಾಡಿಕೊಂಡರು. ಇನ್ನೂ ನೀವು ಖುಶಿಯಾಗಿದ್ದರೆ ಅದೇ ನನಗೆ ಸಂತೋಶ, ಅಭಿಮಾನದ ಹೆಸರಿನಲ್ಲಿ ನಿಮ್ ಜೀವ ಕಳೆದುಕೊಳ್ಳಬೇಡಿ ಅಂತ ಹೇಳಿದರು.