ರಾಯಚೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನಿಂದಲೇ ಪತ್ನಿಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ರಾಯಚೂರು ತಾಲೂಕಿನ ಏಗನೂರು ಗ್ರಾಮದಲ್ಲಿ ನಡೆದಿದೆ.
BIGG NEWS: ಜಿಯೋ ಮತ್ತು ಏರ್ಟೆಲ್ 5ಜಿ ಸೇವೆಗಳು ಶೀಘ್ರದಲ್ಲೇ ಈ ನಗರಗಳಿಗೆ ಬರಲಿವೆ ..!
27 ವರ್ಷದ ನಾಗರತ್ನ ಕೊಲೆಯಾದ ಮಹಿಳೆ. ಆಕೆ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆರೋಪಿ ಪತಿ ಶಶಿಕುಮಾರ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಸೆರೆಯಾಗಿದ್ದಾನೆ. ಸದ್ಯ ತಾಯಿಯನ್ನ ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಗಳಾಗಿದ್ದಾರೆ. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಪತಿಯ ಕಾಟಕ್ಕೆ ನಾಗರತ್ನ ಬೇಸತ್ತಿದ್ದಳು. ಗಂಡನ ಕಾಟದಿಂದ ಬೇಸತ್ತು ಕಳೆದ ಎರಡು ದಿನಗಳಿಂದ ಅತ್ತೆಯ ಜೊತೆ ಬೇರೆ ಮನೆಯಲ್ಲಿದ್ದಳು.
BIGG NEWS: ಜಿಯೋ ಮತ್ತು ಏರ್ಟೆಲ್ 5ಜಿ ಸೇವೆಗಳು ಶೀಘ್ರದಲ್ಲೇ ಈ ನಗರಗಳಿಗೆ ಬರಲಿವೆ ..!
ಗಂಡನ ಕಿರುಕುಳದ ಕುರಿತು ಪೊಲೀಸರಿಗೆ ಮೌಖಿಕ ದೂರು ಕೂಡ ನೀಡಿದ್ದಳು, ಗಂಡನನ್ನ ಠಾಣೆಗೆ ಕರೆಯಿಸಿ ಬುದ್ಧಿ ಹೇಳುವುದಾಗಿ ಪೊಲೀಸರು ಧೈರ್ಯ ನೀಡಿದ್ದರು. ಆದರೆ ಪಾಪಿ ಪತಿ ಶಶಿಕುಮಾರ್ ಮದ್ಯದ ಅಮಲಿನಲ್ಲಿ ಮತ್ತೆ ಜಗಳ ತೆಗೆದು ಕೊಡಲಿಯಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ. ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ.