ಬೆಂಗಳೂರು : ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ ಪಿ ಎಸ್ ಐ ಹನುಮೇಶ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಲಾಗಿದೆ. ಬೆಂಗಳೂರಿನ ಮಹದೇವಪುರ ಠಾಣೆಯ ಪಿಎಸ್ಐ ಹನುಮೇಶ್ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯಸೆಗಿರುವ ಆರೋಪದಲ್ಲಿ ಇದೀಗ ದೂರು ನೀಡಲಾಗಿದೆ. ಕಾನ್ಸ್ಟೇಬಲ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದೂರು ಸಲ್ಲಿಸಲಾಗಿದೆ. ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ಯಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಕಲಿ ಖಾತೆ ತೆರೆದು ಕ್ವಾಟರ್ಸ್ ಮಹಿಳೆಯರಿಗೆ ಪಿಎಸ್ಐ ಹನುಮೇಶ್ ಮೆಸೇಜ್ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.








