ಬೆಂಗಳೂರು : ಅಂಗವಿಕಲ ನಕಲಿ ಪ್ರಮಾಣ ಪತ್ರ ನೀಡಿದ್ದ ಆರೋಗ್ಯ ಅಧಿಕಾರಿಯನ್ನು ಇದೀಗ ಪೊಲೀಸರ ಅರೆಸ್ಟ್ ಮಾಡಿದ್ದಾರೆ. ಸುಧಾಕರ್ ಮಂಗಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿಯಾಗಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಪಿ ಎಚ್ ಸಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇದೀಗ ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರಿಂದ ಸುಧಾಕರ್ ಬಂಧನವಾಗಿದೆ.
ಸುಮಾರು 21 ಜನರಿಗೆ ಸುಧಾಕರ್ ನಕಲಿ ಪ್ರಮಾಣ ಪತ್ರ ನೀಡಿದ್ದಾನೆ ಕಳೆದ ನಾಲ್ಕು ದಿನಗಳ ಹಿಂದೆ ಪೊಲೀಸರು ಸುಧಾಕನನ್ನು ಬಂಧಿಸಿದ್ದಾರೆ ಎಂಬಿಬಿಎಸ್ಸಿ ಪಡೆದವರ ದಾಖಲಾತಿ ಪರಿಶೀಲನೆ ವೇಳೆ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 21 ವಿದ್ಯಾರ್ಥಿಗಳು ಅಂಗವಿಕಲರ ಕೋಟದಲ್ಲಿ ಸೀಟ್ ಪಡೆದಿದ್ದರು. ಅಂಗವಿಕಲರ ಪ್ರಮಾಣ ಪತ್ರ ಯುಡಿಐಡಿ ಕಾರ್ಡ್ ಒಂದೇ ರೀತಿ ಸಹಿ ಮಾಡಲಾಗಿತ್ತು. ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ವೇಳೆ ಅಕ್ರಮ ನಡೆದಿದ್ದು ಬೆಳಕೆಗೆ ಬಂದಿದೆ.
ಸರ್ಕಾರಿ ನೌಕರಿಗು ಕೂಡ ಆತ ನಕಲಿ ಪ್ರಮಾಣ ಪತ್ರ ನೀಡಿರುವ ಅನುಮಾನ ವ್ಯಕ್ತವಾಗಿದೆ. ಈ ವೇಳೆ ಪೊಲೀಸರು ಆರೋಗ್ಯ ಇಲಾಖೆ ಅಧಿಕಾರಿ ಸುಧಾಕರ್ ಅನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ನಕಲಿ ಪ್ರಮಾಣ ಪತ್ರಕ್ಕೆ ಸಹಿ ಮಾಡಿದ್ದ ವೈದ್ಯರಿಗೂ ಕೂಡ ಬಂಧನದ ಭೀತಿ ಆರಂಭವಾಗಿದೆ. ಸುಧಾಕರ್ ಕಳೆದ 20 ವರ್ಷಗಳಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಂದು ತಿಂಗಳ ಹಿಂದೆ ಮಂಗಳೂರು ಪಿ ಎಚ್ ಸಿ ಗೆ ವರ್ಗಾವಣೆಯಾಗಿತ್ತು. ಕೊಪ್ಪಳ ಜಿಲ್ಲೆಯ ಮಂಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತ ಕೆಲಸ ಮಾಡುತ್ತಿದ್ದ.