ಬೆಂಗಳೂರು: ತಾನು ಪೊಲೀಸ್ ಎಂಬುದಾಗಿ ಹೇಳಿ, ಯುವಕ-ಯುವತಿಯರಿಗೆ ಬೆದರಿಸಿ, ಕಿರುಕುಳ ನೀಡಿ ಸುಲಿಗೆ ಮಾಡುತ್ತಿದ್ದಂತ ನಕಲಿ ಪೊಲೀಸ್ ಅನ್ನು ಬಂಧಿಸಲಾಗಿದೆ.
ಬಂದಿತ ಆರೋಪಿಯನ್ನು ಆಸೀಫ್ ಎಂಬುದಾಗಿ ತಿಳಿದು ಬಂದಿದೆ. ಈತ ಆಟೋ ಚಾಲಕನಾಗಿದ್ದನು. ಪಾರ್ಕ್ ನಲ್ಲಿದ್ದವರನ್ನೇ ಟಾರ್ಗೆಟ್ ಮಾಡುತ್ತಿದ್ದಂತ ಆರೋಪಿ ಆಸೀಫ್, ತಾನು ಪೊಲೀಸ್ ಎಂಬುದಾಗಿ ಹೇಳಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದನು.
ನಕಲಿ ಪೊಲೀಸ್ ಆಸೀಫ್ ಇಬ್ಬರಿಂದ 12 ಗ್ರಾಂ ಚಿನ್ನದ ಸರ, ಐದು ಗ್ರಾಂ ರಿಂಗ್ ಹಾಗೂ ಹತ್ತು ಸಾವಿರ ಹಣ ಸುಲಿಗೆ ಮಾಡಿದ್ದನು. ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರು ಆಧರಿಸಿ ನಕಲಿ ಪೊಲೀಸ್ ಆಸೀಫ್ ನನ್ನು ಪೊಲೀಸರು ಬಂಧಿಸಿದ್ದಾರೆ.
BREAKING : `ಹನಿಟ್ರ್ಯಾಪ್’ಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ : CM ಸಿದ್ದರಾಮಯ್ಯ ಘೋಷಣೆ | Honeytrap cace