ಮಂಡ್ಯ : ಜಿಲ್ಲೆಯಲ್ಲಿ ನಿರುದ್ಯೋಗವನ್ನು ಹೋಗಲಾಡಿಸಲು ಜಿಲ್ಲೆಗೆ ಕಾರ್ಖಾನೆಗಳು ಬರಬೇಕು ಹಾಗಾಗಿ ಸಾತನೂರು ಫಾರ್ಮ್ ನಲ್ಲಿ ಕಾಡಾಗೆ ಸೇರಿದ ಸರ್ವೇ ನಂ 257 ರಲ್ಲಿರುವ 90 ಎಕರೆ ಜಾಗವನ್ನು ಇಂದು ವೀಕ್ಷಣೆ ಮಾಡಲಾಗಿದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ರವಿಕುಮಾರ್ ಸೋಮವಾರ ಹೇಳಿದರು.
ಮಂಡ್ಯ ನಗರ ಬಳಿಯ ಸಾತನೂರು ಫಾರ್ಮ್ ನಲ್ಲಿ ಖಾಲಿ ಇರುವ ಜಾಗವನ್ನು ಅಧಿಕಾರಿಗಳ ಜೊತೆಗೆ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದರಿ ಜಾಗ ಅಚ್ಚುಕಟ್ಟಾದ ಪ್ರದೇಶವಾಗಿದೆ. ಜಾಗವನ್ನು ಖಾಲಿ ಬಿಡುವುದಕ್ಕಿಂತ ಕೈಗಾರಿಕೆಗೆ ಮೀಸಲಿಡಬೇಕು. ಈಗಾಗಲೇ ಮುಖ್ಯಮಂತ್ರಿಗಳು , ಉಪಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಅವರು ಸದರಿ ಜಾಗಕ್ಕೆ ಕಾರ್ಖಾನೆಗಳು ಬರುವುದೇ ಆದರೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಕೈಗಾರಿಕೆಗೆ ಮೀಸಲಿಡೋಣ ಎಂದು ಹೇಳಿದ್ದಾರೆ ಎಂದರು.
ಹಾಗಾಗಿ ಇಂದು ಸ್ಥಳವನ್ನು ವೀಕ್ಷಣೆ ಮಾಡಲು ಆಗಮಿಸಿದ್ದೇನೆ. ಜಾಗವು ಉತ್ತಮವಾಗಿದ್ದು ಮೂರು ಕಡೆಯಿಂದ ರಸ್ತೆ ಕೂಡಿದೆ. ನೀರಿನ ಸೌಲಭ್ಯವು ಸೂಕ್ತವಾಗಿದ್ದು ನಗರಕ್ಕೆ ಹೊಂದಿಕೊಂಡಂತೆ ಇದೆ. ವಿದೇಶದಗಳಿಂದ ಬರುವ ಕಾರ್ಖಾನೆಗಳಿಗಾಗಿ ನೀಡಬೇಕಾದ ಎಲ್ಲಾ ಸೌಕರ್ಯಗಳು ಇಲ್ಲಿ ಲಭ್ಯವಿದೆ ಕೈಗಾರಿಕೆಗೆ ಮೀಸಲಿಡಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಜಾಗದಲ್ಲಿ 90 ಎಕರೆ ಜಾಗವಿದ್ದು ಹೆಚ್ಚುವರಿ 10 ಎಕ್ರೆ ಜಾಗವನ್ನು ಭೂಸ್ವಾಧೀನ ಗೊಳಿಸಲಾಗುವುದು. ಸಾವಿರ ಎಕರೆ ಅಗತ್ಯವಿದ್ದರೂ ಭೂಸ್ವಾಧೀನ ಮಾಡಿ ಜಾಗವನ್ನು ಕೈಗಾರಿಕೆ ಮೀಸಲಿಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ ಕುಮಾರ. ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮನ್ ಮುಲ್ ಅಧ್ಯಕ್ಷ ಶಿವಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮಂಡ್ಯದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ: ಇಂದು ಅಸ್ಥಿಪಂಜರದ ರೀತಿಯಲ್ಲಿ ಪತ್ತೆ!
ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ








