ನವದೆಹಲಿ : ತುಟ್ಟಿಭತ್ಯೆ (ಡಿಎ) ಹೆಚ್ಚುವರಿ ಕಂತು ಜುಲೈ 1, 2022 ರಿಂದ ಜಾರಿಗೆ ಬರಲಿದೆ ಎಂದು ಇತ್ತೀಚೆಗೆ ವಾಟ್ಸಾಪ್ ಸಂದೇಶವನ್ನ ಸ್ವೀಕರಿಸಿದವರಲ್ಲಿ ನೀವೂ ಒಬ್ಬರಾಗಿದ್ರೆ ನಿಮಗಿದು ಮುಖ್ಯ ಮಾಹಿತಿಯಾಗಲಿದೆ. ಈ ಸಂದೇಶ ನಕಲಿ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಈಗ ಮಾಹಿತಿ ನೀಡಿದೆ.
“ತುಟ್ಟಿಭತ್ಯೆಯ ಹೆಚ್ಚುವರಿ ಕಂತು 01.07.2022 ರಿಂದ ಜಾರಿಗೆ ಬರಲಿದೆ ಎಂದು ವಾಟ್ಸಾಪ್’ನಲ್ಲಿಹರಿದಾಡುತ್ತಿರುವ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶ ನಕಲಿಯಾಗಿದೆ. ವೆಚ್ಚ ಇಲಾಖೆ, ಹಣಕಾಸು ಸಚಿವಾಲಯವು ಅಂತಹ ಯಾವುದೇ ಆದೇಶವನ್ನು ಹೊರಡಿಸಿಲ್ಲ” ಎಂದು ಪಿಐಬಿ ಟ್ವೀಟ್ ಮಾಡಿದೆ.
An order circulating on #WhatsApp claims that the additional installment of Dearness Allowance will be effective from 01.07.2022#PIBFactCheck
▶️This order is #Fake
▶️Department of Expenditure, @FinMinIndia has not issued any such order pic.twitter.com/VQ07ZvpMXE
— PIB Fact Check (@PIBFactCheck) September 22, 2022
ಪಿಐಬಿಯಿಂದ ಫ್ಯಾಕ್ಟ್ ಚೆಕ್ ಪಡೆಯುವುದು ಹೇಗೆ?
ಪಿಐಬಿ ಜನರಿಗೆ ನಕಲಿಯಾಗಬಹುದಾದ ಚಿತ್ರಗಳು, ವೀಡಿಯೊಗಳು ಮತ್ತು ಲೇಖನಗಳನ್ನು ಕಳುಹಿಸಲು ಅನುಮತಿಸುತ್ತದೆ. ಇದು ಅವರಿಗಾಗಿ ಫ್ಯಾಕ್ಟ್-ಚೆಕ್ ನಡೆಸುತ್ತದೆ. ಜನರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಫ್ಯಾಕ್ಟ್ ಚೆಕ್ ಮಾಡಬಹುದು.
* www.factcheck.pib.gov.in ಹೋಗಿ ಮತ್ತು ಚಿತ್ರ ಅಥವಾ ವೀಡಿಯೊವನ್ನು ಅಪ್ ಲೋಡ್ ಮಾಡಿ.
* ಅಥವಾ, ವಾಟ್ಸಾಪ್ ಸಂಖ್ಯೆ +91-8799711259 ಗೆ ಸಂದೇಶದ ಮೂಲಕ ಚಿತ್ರ ಅಥವಾ ವೀಡಿಯೊವನ್ನು ಕಳುಹಿಸಿ
* ಅಥವಾ, ಇಮೇಲ್ ವಿಳಾಸಕ್ಕೆ ಇ-ಮೇಲ್ ಮೂಲಕ ಫೈಲ್ ಗಳನ್ನು ಕಳುಹಿಸಿ pibfactcheck@gmail.com