ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಶೀಘ್ರದಲ್ಲೇ 5,000 ರೂ.ಗಳ ನೋಟುಗಳನ್ನ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ. ಆದ್ರೆ, ಈ ಸುದ್ದಿ ನಿಜಕ್ಕೂ ಅಸಲಿಯೇ.? ನಿಜವಾಗ್ಲೂ ಸರ್ಕಾರ 5 ಸಾವಿರ ರೂಪಾಯಿಗಳ ನೋಟು ಬಿಡುಗಡೆ ಮಾಡಿದ್ಯಾ.? ಆರ್‍ಬಿಐ ನೀಡಿದ ಸ್ಪಷ್ಟನೆ ಮುಂದಿದೆ.
ಅಂದ್ಹಾಗೆ, ಆರ್ಬಿಐ ಇತ್ತೀಚೆಗೆ 2,000 ರೂ ನೋಟುಗಳನ್ನ ಹಿಂತೆಗೆದುಕೊಂಡಿದೆ. ಈಗಿರುವಾಗ ಆರ್‍ಬಿಐ ಹೊಸ 5,000 ರೂ.ಗಳ ನೋಟುಗಳನ್ನ ಬಿಡುಗಡೆ ಮಾಡಿದ್ಯಾ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸುದ್ದಿಗಾಗಿ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಪ್ರಸ್ತುತ, ಭಾರತದಲ್ಲಿ ಅತಿದೊಡ್ಡ ನೋಟು 500 ರೂ. ಇದಲ್ಲದೆ, 200, 100, 50, 50 ಮತ್ತು 10 ರೂಪಾಯಿ ನೋಟುಗಳು ಭಾರತದಲ್ಲಿ ಚಲಾವಣೆಯಲ್ಲಿವೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ವ್ಯಾಪಾರಿಗಳು ಮತ್ತು ದೊಡ್ಡ ಉದ್ಯಮಿಗಳ ನಡುವೆ ಚರ್ಚೆಯನ್ನ ಹುಟ್ಟುಹಾಕಿದೆ.
ಸ್ವಾತಂತ್ರ್ಯದ ನಂತರ 5,000 ಮತ್ತು 10,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು. 1954ರಲ್ಲಿ 1000 ರೂಪಾಯಿ ನೋಟುಗಳನ್ನ ಚಲಾವಣೆಗೆ ತರಲಾಯಿತು. 1978ರಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು 1,000, 5,000 ಮತ್ತು 10,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡರು. ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನ ನಿಗ್ರಹಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಸರ್ಕಾರ ಆಕಾಶವಾಣಿಯಲ್ಲಿ ಪ್ರಕಟಣೆಯಲ್ಲಿಯೂ ಹೊರಡಿಸಲಾಗಿತ್ತು.
ಹೊಸ 5,000 ರೂಪಾಯಿ ನೋಟು ಸುದ್ದಿ ಸಂಪೂರ್ಣ ಸುಳ್ಳು.!
ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವ ಈ ಸುದ್ದಿಯೂ ಅಕ್ಷರಶಃ ಸುಳ್ಳು. ಆರ್ಬಿಐ ಅಂತಹ ಯಾವುದೇ ನಿರ್ಧಾರವನ್ನ ತೆಗೆದುಕೊಂಡಿಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು. ಇದಕ್ಕೆ ಯಾವುದೇ ಆಧಾರವಿಲ್ಲ.
5000 ಮುಖಬೆಲೆಯ ಹೊಸ ನೋಟು : RBI ಹೇಳಿದ್ದೇನು?
5,000 ಮುಖಬೆಲೆಯ ನೋಟುಗಳನ್ನ ಬಿಡುಗಡೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಗವರ್ನರ್ ಹೇಳಿದ್ದಾರೆ. ಆರ್ಬಿಐ ಹೊಸ ಹೆಚ್ಚಿನ ಮೌಲ್ಯದ ನೋಟುಗಳನ್ನ ಪರಿಚಯಿಸಲು ಯೋಜಿಸುತ್ತಿಲ್ಲ. ಆರ್ಬಿಐ ಪ್ರಕಾರ, ದೇಶದ ಪ್ರಸ್ತುತ ಕರೆನ್ಸಿ ವ್ಯವಸ್ಥೆಯು ದೇಶದ ಆರ್ಥಿಕ ಅಗತ್ಯಗಳನ್ನ ಪೂರೈಸಲು ಸಾಕಾಗುತ್ತದೆ. ಹೆಚ್ಚಿನ ಬದಲಾವಣೆಗಳನ್ನ ಮಾಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಎರಡೇ 2 ವಾರ ‘ಸಕ್ಕರೆ’ ತಿನ್ನುವುದನ್ನ ಬಿಟ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ.?
ಹೊಸ ವರ್ಷಕ್ಕೆ ‘ವಾಟ್ಸಾಪ್’ಗೆ ಗುಡ್ ನ್ಯೂಸ್ ; ‘UPI’ ಬಳಕೆದಾರರ ‘ಆನ್ಬೋರ್ಡಿಂಗ್ ಮಿತಿ’ ತೆಗೆದುಹಾಕಿದ ‘NPCI’