ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೊರೊನಾ ಸಾಂಕ್ರಾಮಿಕ ರೋಗವನ್ನ ಎದುರಿಸಲು ಇದುವರೆಗೆ ಕೋಟಿಗಟ್ಟಲೆ ಜನರು ಲಸಿಕೆ ಪ್ರಮಾಣವನ್ನ ಸ್ವೀಕರಿಸಿದ್ದಾರೆ. ನೀವು ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡಿದ್ದರೆ, ಸರ್ಕಾರವು ನಿಮಗೆ 5,000 ರೂ ನೀಡುತ್ತದೆ ಎಂಬ ಸುದ್ದಿ ಓಡಾಡ್ತಿದೆ. ಇಷ್ಟಕ್ಕೂ ಈ ಸುದ್ದಿ ನಿಜಾನಾ? ನಿಜಕ್ಕೂ ಸರ್ಕಾರ ಲಸಿಕೆ ಪಡೆದವ್ರ ಖಾತೆಗೆ 5,000 ಕಳಿಸ್ತಿದ್ಯಾ? ಮುಂದೆ ಓದಿ.
2 ಡೋಸ್ ಪಡೆದವ್ರಿಗೆ 5 ಸಾವಿರ
ವೈರಲ್ ಸಂದೇಶದಲ್ಲಿ ಇರುವಂತೆ, ಕೊರೊನಾ ಲಸಿಕೆ ಪಡೆದ ಜನರು ಕೇವಲ ಒಂದು ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ. ನಂತ್ರ ಸರ್ಕಾರವು ನಿಮಗೆ ಪೂರ್ಣ 5,000 ರೂಪಾಯಿಗಳನ್ನ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಧ್ಯ ಈ ಸಂದೇಶ ಹೆಚ್ಚು ವೈರಲ್ ಆಗುತ್ತಿದೆ.
ಅದ್ರಂತೆ, ಲಸಿಕೆ ಪಡೆದ ನಂತ್ರ 5,000 ರೂಪಾಯಿ ಪಡೆಯುವ ಈ ಕ್ಲೈಮ್ನ ಸತ್ಯವನ್ನ ಕಂಡುಹಿಡಿಯಲು PIB ಸತ್ಯಾಸತ್ಯತೆಯನ್ನ ಪರಿಶೀಲಿಸಿದೆ.
ಪಿಐಬಿ ಈ ಮಾಹಿತಿ ಟ್ವೀಟ್ ಮಾಡಿದೆ..!
ಪಿಐಬಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನ ನೀಡಿದೆ. “ಕೋವಿಡ್ ಲಸಿಕೆ ಪಡೆದವರಿಗೆ ಆನ್ಲೈನ್ ಫಾರ್ಮ್ ಭರ್ತಿ ಮಾಡಿದ ನಂತ್ರ ಪ್ರಧಾನ ಮಂತ್ರಿ ಕಲ್ಯಾಣ ಇಲಾಖೆಯಿಂದ ₹5,000 ನೀಡಲಾಗುತ್ತಿದೆ ಎಂದು ವೈರಲ್ ಸಂದೇಶದಲ್ಲಿ ಹೇಳಲಾಗುತ್ತಿದೆ. ಈ ಸಂದೇಶದ ಹಕ್ಕು ನಕಲಿ ಎಂದು ಪಿಐಬಿ ಹೇಳಿದೆ. ದಯವಿಟ್ಟು ಈ ನಕಲಿ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ” ಎಂದಿದೆ.
एक वायरल मैसेज में दावा किया जा रहा है कि जिन लोगों ने कोविड वैक्सीन लगवा ली है उन्हें एक ऑनलाइन फॉर्म भरने के बाद प्रधानमंत्री जन कल्याण विभाग द्वारा ₹5,000 प्रदान किए जा रहे हैं #PIBFactcheck:
▶️ इस मैसेज का दावा फर्जी है
▶️ कृपया इस फर्जी मैसेज को फॉरवर्ड न करें pic.twitter.com/AV8asQzexu— PIB Fact Check (@PIBFactCheck) July 12, 2022
ನಕಲಿ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇಂತಹ ಸಂದೇಶಗಳ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ಪಿಐಬಿ ಹೇಳಿದೆ. ಇಂತಹ ಸಂದೇಶಗಳನ್ನ ಫಾರ್ವರ್ಡ್ ಮಾಡದಂತೆ ಪಿಐಬಿ ಜನರನ್ನು ಕೇಳಿಕೊಂಡಿದೆ. ಇಂತಹ ಸಂದೇಶಗಳು ದಾರಿತಪ್ಪಿಸುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಹಣವನ್ನ ಅಪಾಯಕ್ಕೆ ಸಿಲುಕಿಸುತ್ತವೆ ಎಂದಿದೆ.
ವೈರಲ್ ಸಂದೇಶದ ವಾಸ್ತವ ಪರಿಶೀಲನೆ ಮಾಡಬಹುದು
ಇಂತಹ ಸಂದೇಶಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ, ನೀವು ಎಂದಾದರೂ ಅಂತಹ ನಕಲಿ ಸಂದೇಶವನ್ನು ಪಡೆದರೆ, ಅದನ್ನು ಫಾರ್ವರ್ಡ್ ಮಾಡಬೇಡಿ, ಆದರೆ ಅದರ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಫ್ಯಾಕ್ಟ್ ಚೆಕ್ ಮಾಡಿ. ಹೌದು, ನೀವು PIB ಮೂಲಕ ಸತ್ಯ ಪರಿಶೀಲನೆಯನ್ನ ಪಡೆಯಬಹುದು. ಇದಕ್ಕಾಗಿ, ನೀವು PIBನ ಅಧಿಕೃತ ಲಿಂಕ್ https://factcheck.pib.gov.in/ ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನ ನೀಡಬೇಕು. ಇನ್ನು ನೀವು ಸಂದೇಶವನ್ನ WhatsApp ಸಂಖ್ಯೆ +918799711259 ಗೆ ಕಳುಹಿಸಬಹುದು ಅಥವಾ ಇಮೇಲ್ : pibfactcheck@gmail.com ಮಾಡಬೋದು.