ಬೆಂಗಳೂರು: ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಿರುವ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ಮಾನ್ಯತಾ ಅವಧಿಯನ್ನು ವಿಸ್ತರಿಸಿ ಆದೇಶಿಸಿದೆ.
ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರು, ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್ ಕಾರ್ಡ್‌ಗಳ ಮಾನ್ಯತಾ ಅವಧಿಯು ದಿನಾಂಕ: 31.12.2025 ಕ್ಕೆ ಕೊನೆಗೊಳ್ಳಲಿದ್ದು, 2026 ಮತ್ತು 2027ನೇ ಸಾಲಿನ ಮಾನ್ಯತೆ ಪಡೆದ ಪತ್ರಕರ್ತರ ಸ್ಮಾರ್ಟ್ ಕಾರ್ಡ್‌ಗಳನ್ನು ಜರೂರಾಗಿ ಮುದ್ರಿಸಿ ನೀಡುವಂತೆ ಕೋರಿರುತ್ತಾರೆ.
ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸುಗಳನ್ನು ಮುದ್ರಿಸಲು ಕಾಲಾವಕಾಶದ ಅವಶ್ಯಕತೆ ಇರುವುದರಿಂದ, ಕ.ರಾ.ರ.ಸಾ.ನಿಗಮದ ವತಿಯಿಂದ ವಿತರಿಸಲಾಗಿರುವ ಸ್ಮಾರ್ಟ್‌ಕಾರ್ಡ್ ಬಸ್‌ಪಾಸ್‌ಗಳ ಮಾನ್ಯತಾ ಅವಧಿಯನ್ನು ಸೂಕ್ತಾಧಿಕಾರಿಗಳ ಅನುಮೋದನೆಯಂತೆ ದಿನಾಂಕ: 28.02.2026 ರವರೆಗೆ ವಿಸ್ತರಿಸಲಾಗಿದೆ.
ಈ ಬಗ್ಗೆ ನಿಗಮದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳುವಳಿಕೆ ನೀಡುವುದು ಮತ್ತು ದಿನಾಂಕ: 31.12.2025 ರವರೆಗೆ ಚಾಲ್ತಿಯಲ್ಲಿರುವ ಸ್ಮಾರ್ಟ್ ಕಾರ್ಡ್ ಬಸ್ ಸ್ ಪಾಸ್‌ಗಳನ್ನು ಹೊಂದಿರುವ ಪತ್ರಕರ್ತರನ್ನು ದಿನಾಂಕ: 28.02.2026 ರವರೆಗೆ ಕ.ರಾ.ರ.ಸಾ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸುವುದು. ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಘಟಕಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲು ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್








