ಮೈಸೂರು: ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ, ರೈಲ್ವೆ ಮಂಡಳಿ 06281/06282 ಮೈಸೂರು–ಅಜ್ಮೀರ್– ಮೈಸೂರು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಅವಧಿ ವಿಸ್ತರಣೆಯನ್ನು ಅನುಮೋದಿಸಿದೆ. ಈ ರೈಲುಗಳು ಹಳೆಯ ಸಮಯ, ನಿಲ್ದಾಣಗಳು ಮತ್ತು ಸಂಚಾರದಂತೆ ಮುಂದುವರೆಯಲಿವೆ.
06281 ಮೈಸೂರು–ಅಜ್ಮೀರ್ ವಿಶೇಷ ಎಕ್ಸ್‌ಪ್ರೆಸ್, ಮೊದಲು 30.08.2025 ರವರೆಗೆ ಮಾತ್ರ ಓಡುವಂತೆ ಪ್ರಕಟಿಸಲಾಗಿತ್ತು. ಇದೀಗ ಇದು 06.09.2025 ರಿಂದ 29.11.2025 ರವರೆಗೆ ಪ್ರತಿ ಶನಿವಾರ ಓಡಲಿದೆ.
ಅದೇ ರೀತಿ, 06282 ಅಜ್ಮೀರ್–ಮೈಸೂರು ವಿಶೇಷ ಎಕ್ಸ್‌ಪ್ರೆಸ್, ಮೊದಲು 01.09.2025 ರವರೆಗೆ ಮಾತ್ರ ಓಡುವಂತೆ ಪ್ರಕಟಿಸಲಾಗಿತ್ತು. ಇದೀಗ ಇದು 08.09.2025 ರಿಂದ 01.12.2025 ರವರೆಗೆ ಪ್ರತಿ ಸೋಮವಾರ ಓಡಲಿದೆ.