ಉದಯ್ಪುರ: ಅಸರ್ವಾ-ಉದೈಪುರ ಎಕ್ಸ್ಪ್ರೆಸ್ ರೈಲು ಹಾದು ಹೋಗುವ ಗಂಟೆಗಳ ಮುನ್ನ ರೈಲು ಹಳಿಗಳಲ್ಲಿ ಸ್ಫೋಟ ಸಂಭವಿಸಿದೆ. ಅಡಚಣೆಯಿಂದಾಗಿ ಡುಂಗರ್ಪುರದಲ್ಲಿ ರೈಲನ್ನು ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ.
BIGG NEWS : ಪ್ರಧಾನಿ ಮೋದಿ ಇಂಡೋನೇಷ್ಯಾ ಭೇಟಿ ; “ಚಿಕ್ಕದಾದ್ರೂ ಬಹಳ ಮುಖ್ಯ” ಎಂದ ಭಾರತೀಯ ರಾಯಭಾರಿ
ವಿಧ್ವಂಸಕ ಕೃತ್ಯ ಸೇರಿದಂತೆ ಎಲ್ಲಾ ಕೋನಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹಳಿಗಳನ್ನು ಮರುಸ್ಥಾಪಿಸುವ ಕಾರ್ಯ ಆರಂಭವಾಗಿದೆ ಎಂದು ಉದಯಪುರದ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಶರ್ಮಾ ತಿಳಿಸಿದ್ದಾರೆ.
ಉದಯಪುರದ ಜವರ್ ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆವ್ಡಾ ಕಿ ನಾಲ್ ಬಳಿ ಸ್ಫೋಟ ಸಂಭವಿಸಿದೆ.
उदयपुर-अहमदाबाद रेल मार्ग के ओडा रेलवे पुल पर रेल पटरियों को नुकसान पहुंचाने की घटना चिंताजनक है। पुलिस व प्रशासन के वरिष्ठ अधिकारी मौके पर हैं। डीजी पुलिस को घटना की तह तक जाने के निर्देश दिए हैं।
— Ashok Gehlot (@ashokgehlot51) November 13, 2022
ಸ್ಥಳೀಯರು ಬೆಳಗ್ಗೆ ಸ್ಫೋಟದ ಬಗ್ಗೆ ನಮಗೆ ಮಾಹಿತಿ ನೀಡಿದರು. ನಾವು ಟ್ರ್ಯಾಕ್ನಲ್ಲಿ ಕೆಲವು ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದೇವೆ. ಕೃತ್ಯವೆಸಗಿದ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಜವರ್ ಮೈನ್ಸ್ ಪೊಲೀಸ್ ಠಾಣೆಯ ಎಸ್ಎಚ್ಒ ಅನಿಲ್ ಕುಮಾರ್ ವಿಷ್ಣೋಯ್ ತಿಳಿಸಿದ್ದಾರೆ.
ಪೊಲೀಸರು ಮತ್ತು ರೈಲ್ವೇ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 31 ರಂದು ಅಹಮದಾಬಾದಿನ ಅಸರ್ವಾ ರೈಲು ನಿಲ್ದಾಣದಿಂದ ಈ ಹಳಿಯಲ್ಲಿ ಅಸರ್ವಾ-ಉದೈಪುರ ಎಕ್ಸ್ಪ್ರೆಸ್ ರೈಲಿನ ಸಂಚಾರಕ್ಕೆ ಚಾಲನೆ ನೀಡಿದ್ದರು.
BIGG NEWS: ‘ಪತಂಜಲಿ’ಯ 5 ಉತ್ಪನ್ನಗಳ ಮೇಲಿನ ನಿಷೇಧವನ್ನು ಹಿಂಪಡೆದ ಉತ್ತರಾಖಂಡ ಸರ್ಕಾರ | Ramdev’s Patanjali