ಮಂಡ್ಯ : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆಯಾಗಲಿದೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಸಮಾವೇಶಕ್ಕೆ ಬಿಜೆಪಿ ಚಾಣಕ್ಯ ಅಮಿತ್ ಶಾ ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ಮುಂದಿನ ವರ್ಷ 2023 ರಲ್ಲೂ ಕೂಡ ಪ್ರಧಾನಮಂತ್ರಿ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆಯಾಗಲಿದೆ, ಮೋದಿ ಸರ್ಕಾರ ಇಂತಹ ಹಲವು ಜನಪರ ಕಾರ್ಯಕ್ರಮಗಳನ್ನ ತರಲಿದೆ ಎಂದು ಹೇಳಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸುನಾಮಿ ಅಲೆ ಅಪ್ಪಳಿಸಲಿದೆ 2023 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.ಕರ್ನಾಟಕದಲ್ಲಿ ಎಲ್ಲೆಡೆ ಬಿಜೆಪಿ ಗಾಳಿ ಬೀಸುತ್ತಿದೆ. 2023 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಜೆಡಿಎಸ್ ನಿಂದ ಜನರು ಬೇಸತ್ತಿದ್ದಾರೆ. ಮಂಡ್ಯ ಜಿಲ್ಲೆಯ ನೀರಾವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿದ್ದೇವೆ, ಈ ಭಾಗದ ನೀರಾವರಿ ಯೋಜನೆಗೆ ಚಾಲನೆ ನೀಡಲಿದ್ದೇವೆ, ಈ ಭಾಗದ ಕಬ್ಬು ಬೆಳೆಗಾರಿಗೆ ಆತ್ಮವಿಶ್ವಾಸ ತುಂಬಲಿದ್ದೇವೆ ಎಂದು ಹೇಳಿದರು. ಈ ಬಾರಿ ಮಂಡ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ. ಹಿಂದಿನ ಸರ್ಕಾರಗಳು ಕಾರ್ಖಾನೆಗಳನ್ನು ಪುನಾರಂಭಿಸುವದಕ್ಕೆ ಹೋಗಿರಲಿಲ್ಲ, ಆದರೆ ನಮ್ಮ ಸರ್ಕಾರ ಹಲವು ಕಾರ್ಖಾನೆಗಳನ್ನು ಪುನರ್ ಆರಂಭಿಸಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
BIGG NEWS: ನ್ಯೂ ಇಯರ್ ದಿನ ಪ್ರವಾಸಿಗರಿಗೆ ಶಾಕ್; ನಂದಿಬೆಟ್ಟಕ್ಕೆ ನಿರ್ಬಂಧ, ಬಿಗಿ ಭದ್ರತೆ
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕ