ಬೆಂಗಳೂರು : ಸಚಿವರಿಗೆ ಕಮಿಷನ್ ನೀಡಿಕೆ ವಿಚಾರದಲ್ಲಿ ಗುತ್ತಿಗೆದಾರ ಸಂಘದ ಕೆಂಪಣ್ಣ ನೀಡಿರುವ ಹೇಳಿಕೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಒತ್ತಾಯಿಸಿದ್ದಾರೆ.
BREAKING NEWS : ಉತ್ತರದ ಸಾರಥ್ಯ ವಹಿಸಿದ ‘ಭೂಪೇಂದ್ರ ಚೌಧರಿ’ ; ಬಿಜೆಪಿ ನೂತನ ‘ರಾಜ್ಯಾಧ್ಯಕ್ಷ’ರಾಗಿ ನೇಮಕ
ವಿಧಾನಸೌದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಂಪಣ್ಣ ಅವರು ಒಂದಾದರೂ ದಾಖಲೆ ಇಟ್ಟುಕೊಂಡು ಮಾತನಾಡಲಿ. ವಿರೋಧ ಪಕ್ಷದವರ ಪ್ರಚೋದನೆಗೆ ಒಳಗಾಗಿ ಅವರು ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದರು.
ಪ್ರಚಾರದ ಗೀಳಿಗಾಗಿ ಈ ರೀತಿ ಮಾಡಬಾರದು. ಯಾವ ಗುತ್ತಿಗೆದಾರ ಕಮಿಷನ್ ನೀಡಿದ್ದಾನೆ ಮತ್ತು ಅವನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು. ಆತ ಯಾವ ಕೆಲಸ ಮಾಡಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು ಎಂದರು.
BREAKING NEWS : ಉತ್ತರದ ಸಾರಥ್ಯ ವಹಿಸಿದ ‘ಭೂಪೇಂದ್ರ ಚೌಧರಿ’ ; ಬಿಜೆಪಿ ನೂತನ ‘ರಾಜ್ಯಾಧ್ಯಕ್ಷ’ರಾಗಿ ನೇಮಕ
ಯಾವೆಲ್ಲ ಗುತ್ತಿಗೆದಾರರು, ಯಾವ ಸಚಿವರಿಗೆ ಎಷ್ಟು ಮತ್ತು ಯಾವ ಕೆಲಸಕ್ಕೆ ನೀಡಿದ್ದರು ಎನ್ನುವುದನ್ನು ಬಹಿರಂಗಪಡಿಸಬೇಕು. ರಾಜಕಾರಣ ಮಾಡಲು ವಿರೋಧ ಪಕ್ಷದವರು ಕೆಂಪಣ್ಣ ಅವರನ್ನು ಬಳಕೆ ಮಾಡಿಕೊಳ್ಳುವುದನ್ನು ಬಿಡಬೇಕು. 224 ಶಾಸಕರ ಇದ್ದೇವೆ. ಅವರು ಯಾರಿಗೆಲ್ಲ ಕೊಟ್ಟಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಬೇಕು ಇಲ್ಲಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.