ಬೆಂಗಳೂರು: ನಿನ್ನೆ 25 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಅಬಕಾರಿ ಡಿಸಿ ಜಗದೀಶ್ ಬಿದ್ದಿದ್ದರು. ಈ ಪ್ರಕರಣವನ್ನು ರಾಜ್ಯ ಸರ್ಕಾರವು ಆಂತರಿಕ ತನಿಖೆಗೆ ಆದೇಶಿಸಿದೆ.
ಹೌದು.. ಅಬಕಾರಿ ಇಲಾಖೆಯ ವೆಂಕಟೇಶ್ ಅವರು ಆಂತರೀಕ ತನಿಖೆಗೆ ಅಬಕಾರಿ ಡಿಸಿ ಜಗದೀಶ್ ಲಂಚ ಸ್ವೀಕಾರದ ವೇಳೆಯಲ್ಲೇ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವನ್ನು ವಹಿಸಿದ್ದಾರೆ. ತನಿಖೆಯ ನಂತ್ರ ಇಲಾಖೆಗೆ ವರದಿಯನ್ನು ನೀಡಲು ಸೂಚಿಸಿದ್ದಾರೆ.
ವಿಪಕ್ಷಗಳು ಅಬಕಾರಿ ಸಚಿವರ ಮೇಲೆ ಮುಗಿಬೀಳುತ್ತಿರುವ ಹಿನ್ನೆಲೆ ಆಂತರಿಕ ತನಿಖೆಗೆ ಸೂಚಿಸಿದ್ದು, ಆಂತರಿಕ ತನಿಖೆ ಮಾಡಿ ಸಚಿವರಿಗೆ ವರದಿ ಸಲ್ಲಿಕೆ ಮಾಡಲಿದ್ದಾರೆ. ಪರವಾನಗಿಯನ್ನ ಆನ್‌ಲೈನಲ್ಲಿ ಅಪ್ಲೈ ಮಾಡೋದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಯಾರನ್ನು ಭೇಟಿ ಮಾಡುವ ಅಗತ್ಯ ಇಲ್ಲ ಅಂತಾ ಅಬಕಾರಿ ಇಲಾಖೆಯ ವಾದವಾಗಿದೆ.. ಹಾಗಾಗಿ ಲೋಕಾಯುಕ್ತ ದಾಳಿ ಪ್ರಕರಣದ ದಾಳಿ ಬಳಿಕ ಸಂಪೂರ್ಣ ಮಾಹಿತಿ ಪಡೆಯಲು ಆಂತರಿಕ ತನಿಖೆ ಮಾಡುತ್ತಿದ್ದಾರೆ.
ಕೊನೆ ಉಸಿರಿರುವವರೆಗೂ ರಾಜ್ಯದ ಸೇವೆ ಮಾಡುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ








