ನವದೆಹಲಿ : ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಮಾಜಿ ಮುಖ್ಯಸ್ಥ ಎ.ಎಸ್. ದುಲತ್ ಅವರು ಮಂಗಳವಾರ ದೆಹಲಿಯಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ದುಲಾತ್ ಅವರು ಭಾರತೀಯ ಗುಪ್ತಚರ ಬ್ಯೂರೋದ ಮಾಜಿ ವಿಶೇಷ ನಿರ್ದೇಶಕರೂ ಆಗಿದ್ದರು. ನಿವೃತ್ತಿಯ ನಂತರ ಅವರು ಜನವರಿ 2000 ರಿಂದ ಮೇ 2004 ರವರೆಗೆ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.
ಒಂಬತ್ತು ದಿನಗಳ ವಿರಾಮದ ನಂತರ ದೆಹಲಿಯಲ್ಲಿ ಭಾರತ್ ಜೋಡೊ ಯಾತ್ರೆ ಪುನಾರಂಭಗೊಂಡಿದ್ದು, ಶಿವಸೇನೆಯ ಸಂಸದೆ ಪ್ರಿಯಾಂಕಾ ಚತುರ್ವೇದಿ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು.
Former Research and Analysis Wing (RAW) chief AS Dulat joins Congress MP Rahul Gandhi during Bharat Jodo Yatra in Delhi
(Source: AICC) pic.twitter.com/A9Z7ZCcOND
— ANI (@ANI) January 3, 2023
ಭಾರತ್ ಜೋಡೊ ಯಾತ್ರೆಯು ಮಧ್ಯಾಹ್ನ ಉತ್ತರ ಪ್ರದೇಶವನ್ನು ಪ್ರವೇಶಿಸಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಯುಪಿ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.
ಉತ್ತರ ಪ್ರದೇಶದಿಂದ ಯಾತ್ರೆಯು ಜನವರಿ 6 ರಿಂದ 10 ರವರೆಗೆ ಹರಿಯಾಣದಲ್ಲಿ, ಜನವರಿ 11 ರಿಂದ 20 ರವರೆಗೆ ಪಂಜಾಬ್ನಲ್ಲಿ ಮತ್ತು ಜನವರಿ 19 ರಂದು ಹಿಮಾಚಲ ಪ್ರದೇಶದಲ್ಲಿ ಒಂದು ದಿನವನ್ನು ಕಳೆಯಲಿದೆ. ಯಾತ್ರೆಯು ಜನವರಿ 20 ರ ಸಂಜೆ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಲಿದೆ.
ಭಾರತ್ ಜೋಡೋ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಧ್ವಜಾರೋಹಣದೊಂದಿಗೆ ಕೊನೆಗೊಳ್ಳಲಿದೆ.
ಕನ್ಯಾಕುಮಾರಿಯ ಗಾಂಧಿ ಮಂಟಪದಿಂದ ದೆಹಲಿಯ ಕೆಂಪು ಕೋಟೆಯವರೆಗೆ ಇದುವರೆಗೆ 3,122 ಕಿಮೀ ಕ್ರಮಿಸಿದೆ. 108 ದಿನಗಳಲ್ಲಿ, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ಯಾತ್ರೆ ನಡೆದಿದೆ.
ನಡು ರಸ್ತೆಯಲ್ಲೇ ರೋಮಿಯೋಗಳ ‘ರೊಮ್ಯಾನ್ಸ್’ : ಬೈಕ್ ಓಡಿಸುತ್ತಿದ್ದ ಪ್ರಿಯತಮೆಗೆ ಮುತ್ತಿನ ಸುರಿಮಳೆ..!
Siddeshwara Swamiji: ಅಗ್ನಿ ಸ್ಪರ್ಷದ ಬಳಿಕ ಈ ಗಾಳಿಯಲ್ಲಿ ಸಿದ್ದೇಶ್ವರ ಶ್ರೀಗಳು ಇರುತ್ತಾರೆ – ಸಿಎಂ ಬೊಮ್ಮಾಯಿ
China covid update : ಚೀನಾದಲ್ಲಿ ಕೊರೊನಾ ಉಲ್ಬಣ : ಶಾಂಘೈನಲ್ಲಿ 70 ಪ್ರತಿಶತದಷ್ಟು ಜನರಿಗೆ ಕೋವಿಡ್