ಕೋಲ್ಕತ್ತಾ : ಪುತ್ರನೊಬ್ಬ ತನ್ನ ತಂದೆಯಾದ ನೌಕಾಪಡೆಯ ಮಾಜಿ ಅಧಿಕಾರಿಯನ್ನು ಕೊಲೆಗೈದು, ಆತನ ದೇಹವನ್ನು ತುಂಡರಿಸಿ, ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಕೊಳಕ್ಕೆ ಎಸೆದಿರುವ ಘಟನೆ ಕೋಲ್ಕತ್ತಾ ಬಳಿಯ ಬರುಯಿಪುರ್ ಪ್ರದೇಶದಲ್ಲಿ ನಡೆದಿದೆ.
ಕೋಲ್ಕತ್ತಾ ಬಳಿಯ ದಕ್ಷಿಣ 24 ಪರಗಣಗಳ ಬರುಯಿಪುರ್ ಪ್ರದೇಶದ ಕೊಳದಿಂದ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಛಿದ್ರಗೊಂಡ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ. ಅವರು 2000 ರಲ್ಲಿ ನಿವೃತ್ತರಾದ ಭಾರತೀಯ ನೌಕಾಪಡೆಯ ಮಾಜಿ ನಾನ್ ಕಮಿಷನ್ಡ್ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 15 ರಂದು ಕುಟುಂಬವು ಉಜ್ವಲ್ ಚಕ್ರವರ್ತಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಇದೀಗ ಅವರ ದೇಹವು ಪ್ಲಾಸ್ಟಿಕ್ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಬರುಯಿಪುರದ ಪೊಲೀಸ್ ವರಿಷ್ಠಾಧಿಕಾರಿ ಪುಷ್ಪಾ ತಿಳಿಸಿದ್ದಾರೆ.
ಉಜ್ವಲ್ ಚಕ್ರವರ್ತಿ ಮದ್ಯವ್ಯಸನಿಯಾಗಿದ್ದು, ಮಗನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ನವೆಂಬರ್ 14 ರಂದು ಚಕ್ರವರ್ತಿ ತನ್ನ ಕುಟುಂಬದೊಂದಿಗೆ ಜಗಳವಾಡಿದ್ದಾರೆ. ಈ ವೇಳೆ ಕೋಪಗೊಂಡ ಅವರ ಮಗ ಚಕ್ರವರ್ತಿ ಮೇಲೆ ದಾಳಿ ಮಾಡಿ ಕೊಂದಿದ್ದಾನೆ. ನಂತ್ರ, ದೇಹದ ಭಾಗಗಳನ್ನು ಪ್ಲಾಸ್ಟಿಕ್ನಲ್ಲಿ ಸುತ್ತಿ ಬರುಯಿಪುರ್ ಪ್ರದೇಶದ ಕೊಳಕ್ಕೆ ಎಸೆದಿದ್ದಾನೆ. ಇತರ ಭಾಗಗಳು ಅವನ ಮನೆಯ ಬಳಿ ಕಂಡುಬಂದಿವೆ. ಇದಕ್ಕೆ ಉಜ್ವಲ್ ಚಕ್ರವರ್ತಿ ಪತ್ನಿಯೂ ಸಹಾಯ ಮಾಡಿದ್ದಾಳೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಹಣೆಯ ಮೇಲೆ ʻತಿಲಕʼವನ್ನೇಕೆ ಹಚ್ಚುತ್ತಾರೆ? ಇದರ ಪ್ರಯೋಜನ, ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ
ಗಮನಿಸಿ : ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಹಣೆಯ ಮೇಲೆ ʻತಿಲಕʼವನ್ನೇಕೆ ಹಚ್ಚುತ್ತಾರೆ? ಇದರ ಪ್ರಯೋಜನ, ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ
ಗಮನಿಸಿ : ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ