ಬೆಂಗಳೂರು : ಇಂದಿನಿಂದ 10 ದಿನಗಳ ವರೆಗೆ ಕರ್ನಾಟಕ ವಿಧಾನ ಮಂಡಲ ಬಜೆಟ್ ಅಧಿವೇಶನ ನಡೆಯುತ್ತಿದ್ದು, ರಾಜ್ಯಪಾಲರ ಭಾಷಣದ ಕುರಿತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು ರಾಜ್ಯಪಾಲರ ಭಾಷಣದಲ್ಲಿ ಹೇಳಿರುವುದಿಲ್ಲ ಸತ್ಯಕ್ಕೆ ದೂರವಾಗಿವೆ ಎಂದು ತಿಳಿಸಿದರು.
ಒಂದು ಕಡೆ ಹೇಳುತ್ತಾರೆ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೆ ನೇರವಾಗಿ ಇವತ್ತು ಎಲ್ಲವೂ ಕೂಡ ಕೆಲಸ ನಡೆಯುತ್ತಿದೆ ಅಂತ ಹೇಳುತ್ತಾರೆ.ಮಧ್ಯವರ್ತಿಗಳ ಹಾವಳಿ ಯಾವ ಮಟ್ಟಕ್ಕೆ ಹೋಗಿದೆ ಅಂದರೆ ಸ್ವತಃ ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿಗಳು ಹೇಳಿದ್ದು 50% ಕಮಿಷನ್ ಸರ್ಕಾರ ರಾಜ್ಯದಲ್ಲಿ ಇದೆ ಎಂದು ಹೇಳುತ್ತಾರೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಸರ್ಕಾರ ಬಂದು 8 ತಿಂಗಳ ಆಗಿದೆ ಸರ್ಕಾರಿ ಕಚೇರಿಗಳಲ್ಲಿ ಸುಮಾರು ಎಂಟು ಲಕ್ಷಕ್ಕೆ ಹೆಚ್ಚು ಕಡತಗಳು ಹಾಗೆ ಬಿದ್ದಿವೆ.ಒಟ್ಟಾರೆಯಾಗಿ ಹೇಳಬೇಕೆಂದರೆ ಎಲ್ಲಾ ರಂಗದಲ್ಲೂ ಕೂಡ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯಪಾಲರ ಮುಖೇನ ಇವತ್ತು ಕೇವಲ ಅರ್ಧ ಸತ್ಯವನ್ನು ಹೇಳುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಈ ಸರ್ಕಾರ ಮುಂದೆ ಯಾವುದೇ ಹೊಸ ಯೋಜನೆ ಘೋಷಣೆ ಮಾಡದೇ ರಾಜ್ಯದ ಅಭಿವೃದ್ಧಿದತ್ತ ಗಮನಹರಿಸಬೇಕು. ಆದರೆ ಇದೀಗ ಸರ್ಕಾರ ಕಿಂಚಿತ್ತು ಕಾಳಜಿ ಇಲ್ಲದೆ ಇರುವಂತಹ ಸರ್ಕಾರವಾಗಿದೆ. ರಾಜ್ಯಪಾಲರ ಭಾಷಣ ಮುಖಾಂತರ ಹೇಳಿಸಿರುವುದು ಎಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.