ಬೆಂಗಳೂರು : ಆರ್‌ಎಸ್‌ಎಸ್ ಮತ್ತು ಸರ್ಕಾರದ ನಡುವೆ ಸಂಘರ್ಷ ಮತ್ತೆ ತಾರಕಕ್ಕೆ ಏರಿದ್ದು, ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸಚಿವರು ವಾಗ್ದಾಳಿ ನಡೆಸಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಯಾರು ಕಾನೂನಿನಗಿಂತ ದೊಡ್ಡವರ ಅವರು? ಕಲ್ಲಡ್ಕ ಅಲ್ಲ ಅವರಪ್ಪನಾದರೂ ಅಷ್ಟೇ ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಂವಿಧಾನಕ್ಕಿಂತ ದೊಡ್ಡವರಾದರೇನ್ರಿ ಕಲ್ಲಡ್ಕ ಪ್ರಭಾಕರ್ ಭಟ್? ಕಾನೂನು ಮೀರಿದರೆ ಸರಕಾರ ಏನು ಸುಮ್ಮನೆ ಕೂತಿರುತ್ತಾ? ಕೋರ್ಟ್ ಪರ್ಮಿಷನ್ ಕೊಟ್ಟರೆ ಮಾಡಲಿ ಬೇಡ ಅಂತ ಅನಲ್ಲ. ಪರ್ಮಿಷನ್ ಇಲ್ಲದೆ ಮಾಡಿದರೆ ಸರ್ಕಾರ ಸುಮ್ಮನೆ ಕೂರುತ್ತ? ಇಂತಹ ಪ್ರಚೊದನಕಾರಿ ಹೇಳಿಕೆಗಳನ್ನು ಕೊಡದು ಬಿಟ್ಟು ಕಾನೂನು ಪಾಲನೆ ಮಾಡಿ.
ಕಾನೂನು ಪಾಲನೆ ಮಾಡಿದರೆ ಎಲ್ಲರಿಗೂ ಒಳ್ಳೆಯದು ಅವರಿಗೆ ಮತ್ತು ಅವರ ಸಂಸ್ಥೆಗಳಿಗೆ ಒಳ್ಳೆಯದು. ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುವುದು ಅಲ್ಲ ಶಾಖೆಗಳಲ್ಲಿ ಮಾತಾಡಿದಂಗೆ ಪಬ್ಲಿಕ್ ನಲ್ಲಿ ಮಾತನಾಡಿದರೆ ಪಬ್ಲಿಕ್ ನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.








