ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಗವರ್ನರ್ ಗೆಹ್ಲೊಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟಿನ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ದೂರುದಾರರ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಒಬ್ಬ ಸಚಿವ ತನ್ನ ಇಲಾಖೆಯಲ್ಲದೆ ಬೇರೆಡೆ ಪ್ರಭಾವ ಬೀರಿದರು ಅದು ಸೆಕ್ಷನ್ 7ರ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ವಾದಿಸಿದರು.
ಹೌದು ಇಂದು ಪ್ರಾಸಿಕ್ಯೂಷನ್ ಗೆ ಗವರ್ನರ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ವಾದ ಮಂಡಿಸಿದರು. ನಾನು ಕಾನೂನು ವಾಸ್ತವಂಶದ ಪ್ರಶ್ನೆಗಳ ಬಗ್ಗೆ ವಾದಿಸುತ್ತೇನೆ ಎಂದು ಹೇಳಿ ವಾದ ಆರಂಭಿಸಿದರು.
ವಾಕ್ಚಾತುರ್ಯ ವ್ಯಂಗ್ಯದಿಂದ ವಾದಿಸಲು ಬಯಸುವುದಿಲ್ಲ. ಭ್ರಷ್ಟಾಚಾರ ತಡೆ ಕಾಯಿದೆ ಸೆ.17 ಆದರಿಸಿ ವಾದಿಸುತ್ತೇನೆ. ಪೊಲೀಸ್ ಅಧಿಕಾರಿ ಯಾವುದೇ ಮನವಿ ಕೂಡ ಸಲ್ಲಿಸುವ ಅಗತ್ಯವಿಲ್ಲ. ಮನವಿ ಸಲ್ಲಿಸದೆಯು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂದು ವಾದಿಸಿದರು.
ಅನುಚಿತ ಅನುಕೂಲ ಪಡೆಯಲು ಪ್ರಭಾವ ಬಳಸಿದರೆ ಅಪರಾಧವಾಗುತ್ತದೆ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ ಕೂಡ ಅದು ಅಪರಾಧವೇ.ವೈಯಕ್ತಿಕ ಪ್ರಭಾವ ಬಳಸಿದರು ಕೂಡ ಅದು ಸೆಕ್ಷನ್ 7ರ ಅಡಿಯಲ್ಲಿ ಅದು ಅಪರಾಧ. ಒಬ್ಬ ಸಚಿವ ತನ್ನ ಇಲಾಖೆಯಲ್ಲದೆ ಬೇರೆಡೆ ಪ್ರಭಾವ ಬೀರಿದರು ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಈ ಕಾಯ್ದೆಯನ್ನು ರಚಿಸಲಾಗಿದೆ ಎಎಂದು ಕೆಜಿ ರಾಘವನ್ ವಾದಿಸಿದರು.
ಈ ಬಗ್ಗೆ ಈಗಾಗಲೇ ಹಿಂದಿನ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಪೋಲಿಸ್ ಅಧಿಕಾರಿಯ ಮನವಿ ಸಲ್ಲಿಸುವ ಅಗತ್ಯವಿಲ್ಲ.ಸೆಕ್ಷನ್ 7ಸಿ ಅನ್ನು ಓದಲು ಬಯಸುತ್ತೇನೆ ಎಂದು ಹೇಳಿ ಅನಗತ್ಯ ಲಾಭ ಅನುಕೂಲ ಪಡೆಯುವುದು ಕಾಯ್ದೆಯ ವ್ಯಾಪ್ತಿಯಲ್ಲಿದೆ. ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವಗೊಳಿಸಿ ಲಾಭ ಪಡೆದರೆ ಅಪರಾಧ. ಈ ವೇಳೆ ನಿಮ್ಮ ವಾದ ಸೆಲ್ಫ್ ಗೋಲ್ ಆಗಬಹುದು ಎಂದು ನ್ಯಾಯಾಧೀಶರು ತಿಳಿಸಿದರು.