ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ನಮ್ಮ ಸ್ನೇಹಪರ ದೇಶಗಳು ಸಹ ಪಾಕಿಸ್ತಾನವನ್ನು ಯಾವಾಗಲೂ ಹಣಕ್ಕಾಗಿ ಭಿಕ್ಷೆ ಬೇಡುತ್ತಿರುವ ದೇಶವೆಂದು ನೋಡಲು ಪ್ರಾರಂಭಿಸಿವೆ ಎಂದು ವಿಷಾದಿಸಿದ್ದಾರೆ. “ಇಂದು, ನಾವು ಯಾವುದೇ ಸ್ನೇಹಪರ ದೇಶಕ್ಕೆ ಹೋದಾಗ ಅಥವಾ ದೂರವಾಣಿ ಕರೆ ಮಾಡಿದಾಗ, ನಾವು ಹಣಕ್ಕಾಗಿ ಭಿಕ್ಷೆ ಬೇಡಲು [ಅವರ ಬಳಿಗೆ] ಬಂದಿದ್ದೇವೆ ಎಂದು ಅವರು ಭಾವಿಸುತ್ತಾರೆ” ಎಂದು ಪಾಕಿಸ್ತಾನದ ಡಾನ್ ನ್ಯೂಸ್ ಬುಧವಾರ ವಕೀಲರ ಸಮಾವೇಶವನ್ನುದ್ದೇಶಿಸಿ ಮಾಡಿದ ಭಾಷಣದ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ನಾವು ಕಳೆದ 75 ವರ್ಷಗಳಿಂದ ಭಿಕ್ಷಾಟನೆ ಬಟ್ಟಲನ್ನು ಹಿಡಿದುಕೊಂಡು ಅಲೆದಾಡುತ್ತಿದ್ದೇವೆ ಎಂದು ಶರೀಫ್ ಹೇಳಿದ್ದಾರೆ. ಇದಲ್ಲದೇ ಅವರು ಮಾತನಾಡುತ್ತ ಪಾಕಿಸ್ತಾನದ ಆರ್ಥಿಕತೆಯು ಪ್ರವಾಹಕ್ಕೆ ಮುಂಚಿತವಾಗಿಯೇ “ಸವಾಲಿನ ಪರಿಸ್ಥಿತಿಯನ್ನು” ಎದುರಿಸುತ್ತಿತ್ತು, ಇದು ಅದನ್ನು ಹೆಚ್ಚು “ಜಟಿಲ” ಗೊಳಿಸಿದೆ ಅಂತ ಹೇಳಿದ್ದಾರೆ.