ನವದೆಹಲಿ:ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಅಥವಾ ಕ್ಲೈಮ್ ಸ್ಟೇಟಸ್ ತಿಳಿಯಲು ಉದ್ಯೋಗಿಗಳು ವೆಬ್‌ಸೈಟ್‌ಗಳಿಗೆ ಅಲೆಯುವ ಅಗತ್ಯವಿಲ್ಲ. ಕೇವಲ ನಿಮ್ಮ ಮೊಬೈಲ್‌ನ ವಾಟ್ಸಾಪ್ (WhatsApp) ಮೂಲಕವೇ ಈ ಎಲ್ಲಾ ವಿವರಗಳನ್ನು ಪಡೆಯುವ ಹೊಸ ತಂತ್ರಜ್ಞಾನ ಆಧಾರಿತ ಸೇವೆಯನ್ನು ಇಪಿಎಫ್‌ಒ ಶೀಘ್ರದಲ್ಲೇ ಆರಂಭಿಸಲಿದೆ.
ಇಪಿಎಫ್‌ಒ ಬಿಡುಗಡೆ ಮಾಡಲಿರುವ ಅಧಿಕೃತ ವಾಟ್ಸಾಪ್ ಹೆಲ್ಪ್‌ಲೈನ್ ನಂಬರ್‌ಗೆ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕೇವಲ ‘Hello’ ಅಥವಾ ‘Hi’ ಎಂದು ಸಂದೇಶ (Message) ಕಳುಹಿಸಬೇಕಾಗುತ್ತದೆ. ತಕ್ಷಣವೇ ಚಾಟ್‌ಬಾಟ್ (Chatbot) ಸಕ್ರಿಯಗೊಂಡು ಗ್ರಾಹಕರಿಗೆ ವಿವಿಧ ಆಯ್ಕೆಗಳನ್ನು ನೀಡುತ್ತದೆ.
ನಿಮ್ಮ ಖಾತೆಯಲ್ಲಿ ಸದ್ಯ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ತಕ್ಷಣವೇ ತಿಳಿಯಬಹುದು.
ಕ್ಲೈಮ್ ಸ್ಟೇಟಸ್ (Claim Status): ನೀವು ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದ್ದರೆ, ಅದರ ಸ್ಥಿತಿ ಏನಾಗಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದು.
ಕೊನೆಯ ಜಮೆ (Last Contribution): ನಿಮ್ಮ ಕಂಪನಿಯು ಕೊನೆಯ ಬಾರಿಗೆ ಯಾವಾಗ ಪಿಎಫ್ ಹಣ ಪಾವತಿಸಿದೆ ಎಂಬ ವಿವರ ಸಿಗಲಿದೆ.
ಸರಳ ದೂರು ಸಲ್ಲಿಕೆ: ಪಿಎಫ್‌ಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ವಾಟ್ಸಾಪ್ ಮೂಲಕವೇ ದೂರು ದಾಖಲಿಸಬಹುದು.
”ಸಾಮಾನ್ಯವಾಗಿ ಇಪಿಎಫ್‌ಒ ವೆಬ್‌ಸೈಟ್ ಅಥವಾ ಉಮಾಂಗ್ (UMANG) ಆ್ಯಪ್ ಬಳಸಲು ತಿಳಿಯದ ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ಕಾರ್ಮಿಕ ವರ್ಗದವರಿಗೆ ಸುಲಭವಾಗಿ ಸೇವೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಟ್ಸಾಪ್ ಬಳಸುವುದರಿಂದ, ಪಿಎಫ್ ಸೇವೆಗಳನ್ನು ಅವರ ಬೆರಳ ತುದಿಗೆ ತರಲಾಗುತ್ತಿದೆ,” ಎಂದು ಇಪಿಎಫ್‌ಒ ಉನ್ನತ ಮೂಲಗಳು ತಿಳಿಸಿವೆ.








