ಬೆಂಗಳೂರು: ನಗರದ ಕೋರಮಂಗಲದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್ ಒ) ಪ್ರಾದೇಶಿಕ ಕಚೇರಿಯು ಜುಲೈ 22 ರವರೆಗೆ ವಿಕಲಚೇತನರು ಮತ್ತು ಹಾಸಿಗೆ ಹಿಡಿದ ಪಿಂಚಣಿದಾರರು ತಮ್ಮ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.
ಪಿಂಚಣಿದಾರರು ಮತ್ತು ಅವರ ಕುಟುಂಬ ಸದಸ್ಯರು ಇಪಿಎಫ್ಒ ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯಬಹುದು. ಅವರ ಫೋನ್ ನಂಬರ್ – 080-29770597/29770590 ಹಾಗೂ ಇಮೇಲ್: ro.koramangala@epfindia.gov.in ಮೂಲಕ ಸಂಪರ್ಕಿಸಬಹುದು.