ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ವಿರುದ್ಧ ನಡೆಯುತ್ತಿರುವ ಆಪರೇಷನ್ ಬುಲ್ಡೋಜರ್ ಕಾರ್ಯಾಚರಣೆ ಇಂದು ಸಹ ಮುಂದುವರೆದಿದೆ. 

BIGG NEWS: ರಾಜ್ಯದಲ್ಲಿ PFI ಮೇಲೆ NIA ರೇಡ್;‌ ಡಿ.ಜೆ ಹಳ್ಳಿ ಕೇಸ್‌ ನಲ್ಲಿ ಬೇಕಾದವರಿಗಾಗಿ ದಾಳಿ ಆಗಿದೆ- ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ

ನಗರದಲ್ಲಿ ಮಾರತ್‍ಹಳ್ಳಿಯ ಪಾಪರೆಡ್ಡಿ ಲೇಔಟ್‍ ನಲ್ಲಿ ಕಾರ್ಯಾಚರಣೆ ನಡೆಸಲಾಯಿತು.ಐದು ಅಂತಸ್ತಿನ ಕಟ್ಟಡವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಉರುಳಿಸಿದೆ. ಅಕ್ಕಪಕ್ಕದ ಮನೆಗಳಿಗೆ ತೊಂದರೆ ಆಗದಂತೆ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ಆರಂಭದ ವೇಳೆ ಪಾಪರೆಡ್ಡಿ ಲೇಔಟ್ ನಲ್ಲಿ ಒತ್ತುವರಿ ತೆರವಿಗೆ ವಿರೋಧ ವ್ಯಕ್ತವಾಯಿತು. ಮಾರ್ಕಿಂಗ್ ಬಿಟ್ಟು ಕಾಂಪೌಂಡ್ ಒಡೆದಿದ್ದೀರಿ. ಮಾರ್ಕಿಂಗ್ ಇಲ್ಲದೇ ಇದ್ದರೂ ತೆರವು ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

BIGG NEWS: ರಾಜ್ಯದಲ್ಲಿ PFI ಮೇಲೆ NIA ರೇಡ್;‌ ಡಿ.ಜೆ ಹಳ್ಳಿ ಕೇಸ್‌ ನಲ್ಲಿ ಬೇಕಾದವರಿಗಾಗಿ ದಾಳಿ ಆಗಿದೆ- ಎಡಿಜಿಪಿ ಅಲೋಕ್‌ ಕುಮಾರ್‌ ಸ್ಪಷ್ಟನೆ

ನಾವು ರಾಜಕಾಲುವೆ ಒತ್ತುವರಿ ಮಾಡಿಲ್ಲ. ಮನೆಯಲ್ಲಿ ಯಾರೂ ಇಲ್ಲ, ಎಲ್ಲಾ ಕೆಲಸಕ್ಕೆ ಹೋಗಿದ್ದಾರೆ. ಒಂದು ದಿನ ಟೈಂ ಕೊಡಿ. ಯಾವುದೇ ಕಾರಣಕ್ಕೂ ಒತ್ತುವರಿ ತೆರವು ನಿಲ್ಲಿಸಲ್ಲ. ಇಲ್ಲೇ ಕಾಯ್ತೀವಿ ಬಾಡಿಗೆಗೆ ಇರುವವರನ್ನ ಕರೆಯಿರಿ. ಮನೆಯಲ್ಲಿನ ಎಲ್ಲಾ ವಸ್ತುಗಳನ್ನ ತಗೆದುಕೊಳ್ಳಿ ಎಂದು ಸೂಚನೆ ನೀಡಲಾಯಿತು.

Share.
Exit mobile version