ಬೆಂಗಳೂರು : ಟೆಕ್ಸ್ ಟೈಲ್ಸ್ ಮಷಿನ್ ಗೆ ಸಿಲುಕಿ ನೌಕರ ಮೃತಪಟ್ಟ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೃತನನ್ನು ಮುನಿಬೀರಯ್ಯ (57) ಎಂದು ಗುರುತಿಸಲಾಗಿದೆ. ಇವರು ಸುಮಾರು 12 ವರ್ಷದಿಂದ ಗೋಪಾಲಕೃಷ್ಣ ಟೆಕ್ಟ್ ಟೈಲ್ಸ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೆಲಸ ಮಾಡುತ್ತಿದ್ದರು, ಇಂದು ಸಂಜೆ 4 ಗಂಟೆಗೆ ಕೆಲಸ ಮಾಡುತ್ತಿದ್ದಾಗ ಟೆಕ್ಸ್ ಟೈಲ್ಸ್ ಮಷಿನ್ ಗೆ ಸಿಲುಕಿ ಗಂಭೀರ ಗಾಯಗೊಂಡಿದ್ದರು. ಆದ್ರೆ ಆಸ್ಪತ್ರೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸುಬ್ರಹ್ಮಣ್ಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಅಪಪ್ರಚಾರ : ಆರೋಪಿ ಸೋಮನಾಥ ನಾಯಕ್ ಕೋರ್ಟ್ ಗೆ ಶರಣು