ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಉದ್ಯೋಗಿಗಳಾಗಿದ್ದು, ಪಿಎಫ್ ಖಾತೆ ಹೊಂದಿದ್ದೀರಾ.? ಪ್ರತಿ ತಿಂಗಳು ನಿಮ್ಮ ಸಂಬಳದಿಂದ ಸ್ವಲ್ಪ ಹಣ ಜಮಾ ಆಗ್ತಿದ್ಯಾ.? ಹಾಗಿದ್ರೆ, ಈ ಸ್ಟೋರಿ ಮುಖ್ಯವಾಗುತ್ತೆ. ಹೌದು, ಈ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ನಿಮ್ಮ ಪಿಎಫ್ ಖಾತೆಯಿಂದ ಹಣವನ್ನ ಹಿಂಪಡೆಯಲು ನೀವು ಬಯಸಿದ್ರೆ, ಮೊದಲು ನೀವು ಈ ಪ್ರಮುಖ ದಾಖಲೆಗಳನ್ನ ನವೀಕರಿಸಬೇಕು. ಇಲ್ಲದಿದ್ರೆ ನೀವು ಹಣವನ್ನ ಹಿಂಪಡೆಯಲು ಹಲವಾರು ತೊಂದರೆಗಳನ್ನ ಎದುರಿಸಬೇಕಾಗುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನ ಭಾಗಶಃ ಅಥವಾ ಸಂಪೂರ್ಣವಾಗಿ ಹಿಂಪಡೆಯಬಹುದು. ಇದನ್ನ ಪಿಎಫ್ ಹಿಂಪಡೆಯುವಿಕೆ ಎಂದು ಕರೆಯಲಾಗುತ್ತದೆ. ನಿವೃತ್ತಿ ಅಥವಾ ಕೆಲಸಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ನಂತ್ರ ಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನ ಹಿಂಪಡೆಯಬಹುದು.
ಈ ಪಿಎಫ್ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತದ ಒಂದು ಭಾಗವನ್ನ ಮದುವೆ, ವೈದ್ಯಕೀಯ ತುರ್ತುಸ್ಥಿತಿ, ಗೃಹ ಸಾಲ ಮರುಪಾವತಿ ಮುಂತಾದ ಕೆಲವು ಷರತ್ತುಗಳಿಗೆ ಒಳಪಟ್ಟು ಹಿಂಪಡೆಯಬಹುದು. ನಿವೃತ್ತಿಯ ಮೊದಲು ಪಿಎಫ್ ಹಣವನ್ನ ಹಿಂಪಡೆಯಲು ನೀವು ಬಯಸಿದರೆ, ಅದಕ್ಕಾಗಿ ಕೆಲವು ದಾಖಲೆಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ದಾಖಲೆಗಳ ಸಹಾಯದಿಂದ ಪಿಎಫ್ ಹಣವನ್ನ ಸುಲಭವಾಗಿ ಹಿಂಪಡೆಯಬಹುದು.
ಅಂದ್ಹಾಗೆ, ಉದ್ಯೋಗಿಗಳಿಗಾಗಿ ಭಾರತ ಸರ್ಕಾರವು ಪ್ರಾರಂಭಿಸಿದ ಉಳಿತಾಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಇಪಿಎಫ್ಒ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯನ್ನು 1951 ರಲ್ಲಿ ಸ್ಥಾಪಿಸಲಾಯಿತು. ಇದನ್ನು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ.
ಪಿಎಫ್ ಹಣವನ್ನ ಹಿಂಪಡೆಯಲು ಅಗತ್ಯವಿರುವ ದಾಖಲೆಗಳು ಇವು.!
* ಎರಡು ರೆವಿನ್ಯೂ ಸ್ಟಾಂಪ್
* ಕ್ಲೈಮ್ ಫಾರ್ಮ್
* ಬ್ಯಾಂಕ್ ಖಾತೆ ವಿವರಗಳು (ಬ್ಯಾಂಕ್ ಖಾತೆಯು ಪಿಎಫ್ ಖಾತೆದಾರರ ಹೆಸರಿನಲ್ಲಿ ಮಾತ್ರ ಇರಬೇಕು)
* ಗುರುತಿನ ಪುರಾವೆ
* ವಿಳಾಸ ಪುರಾವೆ
* IFSC ಕೋಡ್
* ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ ರದ್ದಾದ ಚೆಕ್
* ಹುಟ್ಟಿದ ದಿನಾಂಕ, ತಂದೆಯ ಹೆಸರು ಮುಂತಾದ ವೈಯಕ್ತಿಕ ವಿವರಗಳು ಗುರುತಿನ ಪುರಾವೆಯೊಂದಿಗೆ ಸ್ಪಷ್ಟವಾಗಿ ಹೊಂದಿಕೆಯಾಗಬೇಕು.
ಆದರೆ, ಉದ್ಯೋಗಿಯು 5 ವರ್ಷಗಳ ನಿರಂತರ ಉದ್ಯೋಗದ ಮೊದಲು ತನ್ನ PF ಮೊತ್ತವನ್ನ ಹಿಂಪಡೆದ್ರೆ, ಅವನು ಪ್ರತಿ ವರ್ಷ PF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್ 2, 3 ಅನ್ನು ಒದಗಿಸಬೇಕು.
BREAKING NEWS: ಕನಕಪುರ ನಗರಸಭೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ: ಮಹತ್ವದ ಕಡತಗಳ ಪರಿಶೀಲನೆ