ನವದೆಹಲಿ: ಟ್ವಿಟರ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಬುಧವಾರ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಕಳೆದುಕೊಂಡಿದ್ದು, ಆ ಸ್ಥಾನವನ್ನು ʻಬರ್ನಾರ್ಡ್ ಅರ್ನಾಲ್ಟ್(Bernard Arnault)ʼ ಅಲಂಕರಿಸಿದ್ದಾರೆ.
ಹೌದು, ಫೋರ್ಬ್ಸ್ ಪಟ್ಟಿಯ ಪ್ರಕಾರ, ಮಸ್ಕ್ ಅವರ ನಿವ್ವಳ ಮೌಲ್ಯದಲ್ಲಿ ಕುಸಿತ, ಟೆಸ್ಲಾ ಷೇರುಗಳು ಕುಸಿಯುತ್ತಿರುವ ಕಾರಣ ವಿಶ್ವದ ನಂ.1 ಶ್ರೀಮಂತ ಎಂಬ ಪಟ್ಟಿಯಿಂದ ಕೆಳಗಿಳಿದಿದ್ದಾರೆ.
ಐಷಾರಾಮಿ ಬ್ರಾಂಡ್ ಲೂಯಿಸ್ ವಿಟಾನ್ ಅವರ ಪೋಷಕ ಕಂಪನಿ LVMH ನ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ಇದೀಗ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಸ್ಥಾನ ಪಡೆದರು.
ಫೋರ್ಬ್ಸ್ ಪ್ರಕಾರ, ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ನ ಮೂಲ ಕಂಪನಿ LVMH ನ ಮುಖ್ಯ ಕಾರ್ಯನಿರ್ವಾಹಕ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅವರ ಕುಟುಂಬವು $185.4 ಶತಕೋಟಿಯ ವೈಯಕ್ತಿಕ ಸಂಪತ್ತನ್ನು ಪಡೆದುಕೊಂಡಿದೆ.
ಸೆಪ್ಟೆಂಬರ್ 2021 ರಿಂದ ವಿಶ್ವದ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿರುವ ಮಸ್ಕ್, $ 185.3 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಎಲೋನ್ ಮಸ್ಕ್ ಅವರು ಸೆಪ್ಟೆಂಬರ್ 2021 ರಿಂದ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಶ್ರೀಮಂತ ಪಟ್ಟಿಯಿಂದ ಹಿಂದಿಕ್ಕಿದಾಗಿನಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಸರು ಪಡೆದಿದ್ದರು.
2022 ರಲ್ಲಿ ಮಸ್ಕ್ ಅವರ ನಿವ್ವಳ ಮೌಲ್ಯವು ಈಗಾಗಲೇ $ 200 ಶತಕೋಟಿಗಿಂತ ಕಡಿಮೆಯಾಗಿದೆ. ಟೆಸ್ಲಾ ಷೇರುಗಳು ಎರಡು ವರ್ಷಗಳಲ್ಲಿ ಕಡಿಮೆ ಮಟ್ಟಕ್ಕೆ ಇಳಿದಿರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ELECTION BREAKING : ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ : ಕಾಂಗ್ರೆಸ್-ಬಿಜೆಪಿ ಸಮಬಲದ ಹೋರಾಟ