ಹಾಸನ : ಕಳೆದ ನವೆಂಬರ್ 23ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದವಳೆಕಟ್ಟೆ ಅರಣ್ಯ ವಲಯ ಪ್ರದೇಶದಲ್ಲಿ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆ ವೇಳೆಯಲ್ಲಿ ದಸರಾ ಆನೆ ಅರ್ಜುನ ಹೋರಾಡಿ ವೀರಮರಣ ಹೊಂದಿದ್ದ.
ಈ ನೆಲೆಯಲ್ಲಿ ಇದೀಗ ಹಾಸನ ಜಿಲ್ಲೆಯ ಬೇಲೂರು ಭಾಗದಲ್ಲಿ ಇಂದಿನಿಂದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.ಡಿಸೆಂಬರ್ 4 ರಂದು ಕಾಡಾನೇ ಸೆರೆಯಲ್ಲಿ ಅರ್ಜುನ ಸಾವನ್ನಪ್ಪಿದ್ದ. ಅರ್ಜುನನನ್ನು ಕೊಂದ ಕಾಡಾನೆ ಸೆರೆ ಹಿಡಿಯುವುದಾಗಿ ಮಾವುತರು ಶಪಥ ಮಾಡಿದ್ದಾರೆ.
ಈಗಾಗಲೇ ಕ್ಯಾಂಪ್ಗೆ ನಾಲ್ಕು ಸಾಕಾನೆಗಳು ಬಂದಿವೆ.ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕೋಡಿ ಆನೆ ಕ್ಯಾಂಪ್ ಗೆ ಹರ್ಷ, ಸುಗ್ರೀವ, ಧನಂಜಯ,ಅಶ್ವತ್ಥಮ ಹಾಗೂ ಪ್ರಶಾಂತ್ ಆನೆಗಳು ಈಗಾಗಲೇ ಬಂದಿವೆ.ಇಂದು ಭೀಮ ಅಭಿಮನ್ಯು ಸೇರಿದಂತೆ ಮತ್ತಷ್ಟು ಆನೆಗಳು ಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.ಈ ಬಾರಿ 10 ಸಾಕಾಣಿ ಬಳಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲಾಗುತ್ತದೆ.
ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆ ಸರಿ ಹಿಡಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನವೆಂಬರ್ 23ರಂದು ಕಾಡಾನೆ ಸರಕಾರಿ ಆಚರಣೆ ಆರಂಭಿಸಿದ್ದ ಅಧಿಕಾರಿಗಳು, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳಿಕಟ್ಟೆ ವಲಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ ಅರ್ಜುನ ಬಲಿಯಾಗಿದ್ದ.