ತುಮಕೂರು : ಹೆಜ್ಜೇನು ದಾಳಿಯಿಂದ ರೈತ ಹಾಗೂ ಬಾಲಕನ ಸ್ಥಿತಿ ಗಂಭೀರವಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಯಲ್ಕೂರು ಗ್ರಾಮದಲ್ಲಿ ಒಂದು ಘಟನೆ ನಡೆದಿದೆ. ಕೃಷಿ ಕೆಲಸ ಮಾಡುತ್ತಿದ್ದಾಗ ನರಸಿಂಹ ಗೌಡ ಮತ್ತು ಸುಪ್ರೀತ್ ಎಂಬ ಬಾಲಕನ ಮೇಲೆ ಏಕಾಏಕಿ ಹೆಜ್ಜೆನು ದಾಳಿ ನಡೆಸಿವೆ.
ಅಜ್ಜ ನರಸಿಂಹ ಗೌಡ ಹಾಗೂ ಸುಪ್ರೀತ್ ಗಂಭೀರವಾದ ಗಾಯಗಳಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.








