ಬೆಂಗಳೂರು: ಬೇಸಿಗೆ ಕಾಲ ಈಗ ಶುರುವಾಗಿದೆ. ಈ ನಡುವೆ ರಾಜ್ಯದಲ್ಲಿ ಬೇಸಿಗೆ ಕಾಲ ಆರಂಭದಲ್ಲೇ ಅನಧಿಕೃತವಾಗಿ ವಿದ್ಯುತ್ ಕಡಿತದ ಕಾಟ ಶುರುವಾಗಿದೆ
ಹೌದು, ಬೆಂಗಳೂರು ವ್ಯಾಪ್ತಿಯಲ್ಲಿ ದಾಖಲೆಯ ವಿದ್ಯುತ್ ಬಳಕೆಯಾಗಿದ್ದು, ಈ ವರ್ಷ ಗರಿಷ್ಠ 8,128 ಮೆಗಾ ವ್ಯಾಟ್ ವಿದ್ಯುತ್ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಇದು ಬಿಸಿಲಿನಿಂದ ಜನತೆ ತಮ್ಮನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫ್ಯಾನ್, ಎಸಿ, ಫ್ರಿಡ್ಜ್ ಬಳಕೆಯನ್ನು ಹೆಚ್ಚು ಬಳಕೆ ಮಾಡುತ್ತಿರುವುದನ್ನು ತೋರಿಸಿದೆ. ಇದಲ್ಲದೇ ರಾಜ್ಯದ ನಾನಾಕಡೆಗಳಲ್ಲಿ ವಿದ್ಯುತ್ ಅನ್ನು ಸಮಯವಲ್ಲದ ಸಮಯದಲ್ಲಿ ಕಟ್ ಮಾಡುತ್ತಿರುವುದು ಕೂಡ ಹೆಚ್ಚು ಆಗುತ್ತಿದ್ದು, ಈಗಲೇ ಹೀಗೆ ಹೆಚ್ಚಿನ ಸಮಯದಲ್ಲಿ ಪವರ್ ಕಟ್ ಮಾಡುವುದರಿಂದ ಮುಂದೆ ಇನ್ನೇರಡು ತಿಂಗಳು ರಾಜ್ಯದ ಪರಿಸ್ಥಿತಿಯ ಯಾವ ರೀತಿಯಲ್ಲಿ ಇರಲಿದೆ ಎನ್ನುವುದನ್ನು ಈಗಲೇ ಗೊತ್ತು ಆಗುತ್ತಿದೆ.
ಪ್ರತಿದಿನ 200 ರಿಂದ 250 ದಶಲಕ್ಷ ಯೂನಿಟ್ ನಷ್ಟಿದ್ದ ಬೇಡಿಕೆ 323 ದಶ ಲಕ್ಷಕ್ಕೆ ಹೆಚ್ಚಳವಾಗಿದೆ ಎನ್ನಲಾಗಿದೆ. ಇದಲ್ಲದೇ ರಾಜ್ಯದಲ್ಲಿನ ಜಲಶಾಯಗಳು ಕೂಡ ಬರಿದಾಗಿದ್ದು, ವಿದ್ಯುತ್ ಉತ್ಪದನದ ಮೇಲೆ ಕೂಡ ಗಂಭೀರವಾದ ಪರಿಣಾಮವನ್ನು ಬೀರಿದೆ. ಒಟ್ಟಿನಲ್ಲಿ ಬೇಸಿಗೆ ಆರಂಭದಲ್ಲಿ ಹೀಗೆ ಆಗತ್ತಿದ್ದರೇ ಮುಂದೆ ಏನು ಏನ್ನುವುದು ಈಗ ಪ್ರಶ್ನೆಯಾಗಿದೆ.