ಕೊಯಮತ್ತೂರು: ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಟ್ ನುಂಗಿದ್ದು, 55 ವರ್ಷದ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ನೆಟ್ ಅನ್ನು ಆತನ ದೇಹದಿಂದ ವೈದ್ಯರು ಹೊರ ತೆಗೆದಿದ್ದಾರೆ.
ಕೊಯಮತ್ತೂರು ಮೂಲದ ಶಂಸುದ್ದೀನ್ ಎಂಬಾತ ಕೆಲಸದ ವೇಳೆ ಆಕಸ್ಮಿಕವಾಗಿ ಕಬ್ಬಿಣದ ನಟ್ ನುಂಗಿದ್ದಾನೆ. ನಟ್ ಒಳಗೆ ಹೋದ ಕೂಡಲೇ ಶಂಸುದ್ದೀನ್ ಕೆಮ್ಮಲು ಪ್ರಾರಂಭಿಸಿದನು. ನಂತರ ಅವನಿಗೆ ಉಸಿರಾಡಲು ಕಷ್ಟವಾಯಿತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಶಂಸುದ್ದೀನ್ ಅವರನ್ನು ನಂತರ ಆಟೋರ್ಹಿನೊಲಾರಿಂಗಾಲಜಿ ವಿಭಾಗಕ್ಕೆ ಸೇರಿಸಲಾಯಿತು.
ಅವರ ಎದೆಯ ಎಕ್ಸ್-ರೇ ನೋಡಿದ ವೈದ್ಯರು ನಟ್ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ ಮತ್ತು ಎಡ ಶ್ವಾಸಕೋಶಕ್ಕೆ ಹೋಗುತ್ತಿದೆ ಎಂಬುದು ಗೊತ್ತಾಗಿದೆ . ಕೂಡಲೇ ತುರ್ತು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ನಟ್ ಹೊರತೆಗೆದು ಅವರ ಜೀವವನ್ನು ಉಳಿಸಿದರು.
BIGG NEWS ; ‘EPFO’ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್ ; ₹14,000 ಬೋನಸ್ ಘೋಷಣೆ