ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಪರಿಷತ್ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ. ಅಂತಿಮ ಕಣದಲ್ಲಿ ಒಟ್ಟು ಐವರು ಅಭ್ಯರ್ಥಿಗಳಿದ್ದು, ಒಂದು ಸ್ಥಾನಕ್ಕೆ ಈಗಾಗಲೇ ಅವಿರೋಧ ಆಯ್ಕೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ರಾಜ್ಯ ಪರಿಷತ್ ಸ್ಥಾನಕ್ಕೆ ನಾಮಪತ್ರ ಹಿಂಪಡೆಯಲು ದಿನಾಂಕ: 11-11-2024 ಕೊನೆಯ ದಿನವಾಗಿತ್ತು. ಈ ಬಳಿಕ ಅಂತಿಮ ಕಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು, ರಾಜ್ಯ ಪರಿಷತ್ ಸ್ಥಾನಕ್ಕೆ ಮೂವರು ಕಣದಲ್ಲಿ ಇದ್ದಾರೆ.
ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಸುರೇಶ್.ಎಸ್.ಕೆ ಹಾಗೂ ಸಂತೋಷ್ ಕುಮಾರ್.ಎನ್ ಕಣದಲ್ಲಿ ಇದ್ದಾರೆ. ನಾಮಪತ್ರ ವಾಪಾಸ್ ಪಡೆದ ಬಳಿಕ ರಾಜ್ಯ ಪರಿಷತ್ ಸ್ಥಾನದ ಚುನಾವಣಾ ಕಣದಲ್ಲಿ ದೇವೇಂದ್ರಪ್ಪ.ಕೆ, ನಾಗರಾಜ.ಕೆ ಹಾಗೂ ಮಂಜುನಾಥ ಎಂ.ಎಸ್ ಹುರಿಯಾಳುಗಳಾಗಿದ್ದಾರೆ.
ನಾಳೆ ಅಧ್ಯಕ್ಷರು ಹಾಗೂ ರಾಜ್ಯಪರಿಷತ್ ಸ್ಥಾನಕ್ಕೆ ಆಯ್ಕೆಗಾಗಿ ಸಾಗರದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟು 34 ಮತಗಳಿದ್ದು, 18 ವೋಟ್ ಗಳನ್ನು ಪಡೆದವರು ವಿಜಯಶಾಲಿಯಾಗಲಿದ್ದಾರೆ. ಮತದಾನದ ಬಳಿಕ ಮತಏಣಿಕೆ ನಡೆಯಲಿದ್ದು, ಯಾರು ಗೆಲುವು, ಯಾರು ಸೋಲು ಎಂಬುದಾಗಿ ಫಲಿತಾಂಶದ ಮೂಲಕ ಅಧಿಕೃತವಾಗಿ ಮಾಹಿತಿ ಹೊರ ಬೀಳಲಿದೆ. ಅಲ್ಲಿಯವರೆಗೆ ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ
ಸಾಗರ ತಾಲ್ಲೂಕು ಜನತೆ ಗಮನಕ್ಕೆ: BH ರಸ್ತೆಯಲ್ಲಿ ನೂತನ ‘ನಂದಿನಿ ಐಸ್ ಕ್ರೀಮ್ ಪಾರ್ಲರ್’ ಓಪನ್