ಬೆಂಗಳೂರು : ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ವೃದ್ಧೆ ಬಳಿ ಕಳ್ಳಿಯರು ಸರಗಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ವಿಜಯಪುರ ಪಟ್ಟಣದ ಅಶೋಕ್ ನಗರದಲ್ಲಿ ಘಟನೆ ನಡೆದಿದೆ.
ಶಿಡ್ಲಘಟ್ಟದಿಂದ ದೇವನಹಳ್ಳಿಗೆ ಹೋಗುವ ಬಸ್ಸಿನಲ್ಲಿ ವೃದ್ಧೆಯ ಹಿಂದೆ ಮುಂದೆ ಕುಳಿತು ಕಳ್ಳಿಯರು ಸರ ಎಗರಿಸಿದ್ದಾರೆ. ಬಳಿಕ ಪರಾರಿಯಾಗುತ್ತಿದ್ದ ವೇಳೆ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ.
ವೆಂಕಟಮ್ಮ ವೃದ್ಧೆಯ ಕತ್ತಿನಿಂದ ಸರ ಎಗರಿಸಿದ್ದು, ಸುಧಾ ಹಾಗೂ ಅನು, ಬಸ್ ನಿಲ್ಲಿಸುತ್ತಿದ್ದಂತೆ ಸರ ಇಲ್ಲ ಎಂದು ವೃದ್ಧೆ ಗೋಳಾಡಿದ್ದಾರೆ. ಈ ವೇಳೆ ಪರಾರಿಯಾಗುತ್ತಿದ್ದಂತೆ ಕಳ್ಳಿಯರನ್ನು ಚೇಸ್ ಮಾಡಿ ಸ್ಥಳೀಯರು ಹಿಡಿದಿದ್ದಾರೆ. ರೆಡ್ ಹ್ಯಾಂಡ್ ಆಗಿ ಖತರ್ನಾಕ್ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ.








