ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಯುವಕರು ಕ್ರೇಜಿಗೆ ಬೈಕ್ ಮೇಲೆ ಸ್ಟಂಟ್ ಮಾಡುತ್ತಾರೆ. ಆದರೆ ವೃದ್ಧರೋರ್ವರು ಸೈಕಲ್ ಮೇಲೆ ಸಾಹಸ ಪ್ರದರ್ಶನ ಮಾಡುವ ಮೂಲಕ ವಯಸ್ಸು ಕೇವಲ ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ. ಸ್ಟಂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ: ರಾಜ್ಯದ ನೀರಾವರಿ, ಜಲಜೀವನ್ ಮಿಷನ್ ಯೋಜನೆಗಳ ಕುರಿತು ಚರ್ಚೆ
ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸೈಕಲ್ ನಲ್ಲಿ ಸಾಹಸ ಪ್ರದರ್ಶಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ರಸ್ತೆಯಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದ ಹಿರಿಯ ಜೀವ, ತನ್ನ ಎರಡು ಕೈಗಳನ್ನು ಚಾಚಿ ತುಂತುರು ಮಳೆಯಲ್ಲಿ ಆ ಕ್ಷಣವನ್ನು ಎಂಜಾಯ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಜಿಂದಗಿ ಗುಲ್ಜಾರ್ ಹೈ ಎಂಬ ಟ್ವಿಟರ್ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ 53 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದಕ್ಕೆ ಪ್ರತಿ ಕ್ಷಣವನ್ನು ಆನಂದಿಸಿ ಎಂದು ಶೀರ್ಷಿಕೆ ನೀಡಲಾಗಿದೆ.
Enjoy every moment ❤️ pic.twitter.com/sOujOxmEfD
— ज़िन्दगी गुलज़ार है ! (@Gulzar_sahab) November 29, 2022
ಇನ್ನು ವಿಡಿಯೋವನ್ನು ವೀಕ್ಷಿಸಿದ ಟ್ವಿಟರ್ ಬಳಕೆದಾರರು ತರಹೇವಾರಿ ಕಮೆಂಟ್ ಮಾಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಉತ್ತರ ಕನ್ನಡದ ಭುವನಗಿರಿಯಲ್ಲಿ ‘ಕನ್ನಡ ರಥ’ಕ್ಕೆ ಅದ್ಧೂರಿ ಚಾಲನೆ