ಮೈಸೂರು : ನಿನ್ನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ಕೆರೆಗೆ ಹಾರಿ ಒಂದೇ ಕುಟುಂಬದ ಮೂರು ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕುಟುಂಬಕ್ಕೆ ಕಾನೂನು ಪದವಿ ಓದುತ್ತಿದ್ದ ಹಿರಿಯ ಮಗಳ ತೀರ್ಮಾನವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮಗಳು ಮನೆ ಬಿಟ್ಟು ಹೋಗಿದ್ದಕ್ಕೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರ್ಯಾದೆಗೆ ಹೆದರಿ ತಂದೆ ತಾಯಿ ಮತ್ತು ಮತ್ತೋರ್ವ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೌದು ನಿನ್ನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಬೂದನೂರು ಗ್ರಾಮದ ಮಹದೇವಸ್ವಾಮಿ ಪತ್ನಿ ಮಂಜುಳಾ ಹಾಗೂ ಪುತ್ರಿ ಹರ್ಷಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಕೆರೆಯಲ್ಲಿ ಮೂವರ ಮೃತ ದೇಹಗಳು ಪತ್ತೆಯಾಗಿವೆ. ಮಾದೇವಸ್ವಾಮಿ ಮತ್ತು ಮಂಜುಳಾ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು ಅರ್ಪಿತಾ ಮತ್ತು ಹರ್ಷಿತ ಇಬ್ಬರು ಹೆಣ್ಣುಮಕ್ಕಳ ಜೊತೆಗೆ ಪೋಷಕರು ವಾಸವಾಗಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮ ಬಿಟ್ಟು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ವಾಸಿಸುತ್ತಿದ್ದರು.
ಎಚ್ ಡಿ ಕೋಟೆಯಲ್ಲೂ ಕೂಡ ತಂದೆ ಮಹಾದೇವಸ್ವಾಮಿ ಸ್ವಂತ ಮನೆ ಖರೀದಿ ಮಾಡಿದ್ದರು. ಹಿರಿಯ ಮಗಳು ಅರ್ಪಿತ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಹರ್ಷಿತ ಬಿಸಿಎ ಓಡುತ್ತಿದ್ದಳು. ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಅರ್ಪಿತ ಆತನನ್ನೇ ಮದುವೆಯಾಗುವುದಾಗಿ ಅರ್ಪಿತ ಪಟ್ಟು ಹಿಡಿದಿದ್ದಾಳೆ. ಮರ್ಯಾದೆಗೆ ಹೆದರಿ ತಂದೆ ಮಹಾದೇವಸ್ವಾಮಿ ಮದುವೆಗೆ ನಿರಾಕರಿಸಿದ್ದಾರೆ. ತಂದೆ ತಾಯಿ ಮಾತು ಧಿಕ್ಕರಿಸಿ ಅರ್ವಿದ ಮನೆ ಬಿಟ್ಟು ಹೋಗಿದ್ದಾಳೆ. ಮರ್ಯಾದೆಗೆ ಹೆದರಿ ಇದೀಗ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ ಬೂದನೂರು ಗ್ರಾಮದಲ್ಲಿ ಕೆರೆಯಲ್ಲಿ ಮೊಹರ ಮೃತದೇಹಗಳು ಪತ್ತೆಯಾಗಿತ್ತು.