ಗಾತ್ರದಲ್ಲಿ ಚಿಕ್ಕದಾದರೂ ಹಲವು ಸಮಸ್ಯೆಗಳ ನಿವಾರಕ ಈ ಮಸಾಲೆಗಳ ರಾಜ – Kannada News Now


Health Lifestyle

ಗಾತ್ರದಲ್ಲಿ ಚಿಕ್ಕದಾದರೂ ಹಲವು ಸಮಸ್ಯೆಗಳ ನಿವಾರಕ ಈ ಮಸಾಲೆಗಳ ರಾಜ

ಸ್ಪೆಷಲ್ ಡೆಸ್ಕ್ : ಏಲಕ್ಕಿ ಎಂದರೆ ಮಸಾಲೆಗಳ ರಾಜ. ಇದು ಆಹಾರ ಪದಾರ್ಥಗಳ ರುಚಿ ಹೆಚ್ಚುಸುತ್ತದೆ ಅನ್ನೋದು ಗೊತ್ತು, ಆದರೆ ಆರೋಗ್ಯಕ್ಕೆ ಜೊತೆಗೆ ಲೈಂಜಿಕ ಆಸಕ್ತಿ ಹೆಚ್ಚಿಸಲು ಇದು ಎಷ್ಟು ಸಹಕಾರಿ ಅನ್ನೋದು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ಇದರಿಂದ ಏನೆಲ್ಲಾ ಲಾಭ ಇದೆ ನೋಡಿ…

ಮೌತ್‌ ಫ್ರೆಶ್‌ನರ್‌ : ಒಂದು ಸಣ್ಣ ಏಲಕ್ಕಿ ಸೇವಿಸುವುದರಿಂದ ಬಾಯಿ ವಾಸನೆ ನಿವಾರಣೆಯಾಗುತ್ತದೆ. ನಿಮ್ಮ ಬಾಯಿಯಿಂದ ವಾಸನೆ ಬರುತ್ತಿದ್ದರೆ ಒಂದು ಎಸಳು ಏಲಕ್ಕಿ ತಿನ್ನಿ ಸಾಕು.

ಲೈಂಗಿಕ ಆಸಕ್ತಿ : ಹಾಲಿನಲ್ಲಿ ಏಲಕ್ಕಿ ಹಾಕಿ ಕುದಿಸಿ. ಸರಿಯಾಗಿ ಕುದಿ ಬಂದ ನಂತರ ಇದಕ್ಕೆ ಸ್ವಲ್ಪ ಜೇನು ಸೇರಿಸಿ. ಇದನ್ನು ಪ್ರತಿ ದಿನ ರಾತ್ರಿ ನಿಯಮಿತವಾಗಿ ನಿದ್ರೆ ಮಾಡುವ ಸಮಯ ಸೇವನೆ ಮಾಡಿ. ಪ್ರತಿ ದಿನ ಏಲಕ್ಕಿ ಹಾಲಿನ ಸೇವನೆ ಮಾಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ, ಜೊತೆಗೆ ಮಧುರ ದಾಂಪತ್ಯ ಜೀವನ ನಿಮ್ಮದಾಗುತ್ತದೆ.

ಜೀರ್ಣಕ್ರಿಯೆ : ಸಾಮಾನ್ಯವಾಗಿ ಆಹಾರ ಸೇವಿಸಿದ ಬಳಿಕ ಏಲಕ್ಕಿ ಸೇವಿಸಲಾಗುತ್ತದೆ. ಆಹಾರ ಸೇವಿಸಿದ ಬಳಿಕ ಏಲಕ್ಕಿ ಸೇವನೆ ಮಾಡಿದರೆ ತಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ.

ಗಂಟಲಿನ ಸಮಸ್ಯೆ ನಿವಾರಣೆ : ನಿಮ್ಮ ಗಂಟಲಿನಲ್ಲಿ ಏನಾದರು ಸಮಸ್ಯೆ ಇದ್ದರೆ ಆ ಸಮಯದಲ್ಲಿ ಏಲಕ್ಕಿ ಸೇವಿಸಿ. ಇದರಿಂದ ನೋವು ನಿವಾರಣೆಯಾಗಿ ನಿಮಗೆ ಫ್ರೆಶ್‌ ಫೀಲ್‌ ಆಗುತ್ತದೆ.

ರಕ್ತ ಕ್ಲೀನ್ ಆಗುತ್ತದೆ : ಏಲಕ್ಕಿಯಲ್ಲಿರುವ ರಾಸಾಯನಿಕ ಗುಣದಿಂದಾಗಿ ಶರೀರದಲ್ಲಿರುವ ಫ್ರೀ ರೆಡಿಕಲ್‌ ಮತ್ತು ಇತರ ವಿಷಯುಕ್ತ ತತ್ವಗಳು ದೂರವಾಗುತ್ತವೆ. ಇದರಿಂದ ರಕ್ತ ಶುದ್ಧವಾಗುತ್ತದೆ.