ಬೊಕಾರೊ (ಜಾರ್ಖಂಡ್): ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ ಎಂಟು ವರ್ಷದ ಬಾಲಕನೊಬ್ಬ ತನ್ನ 75 ವರ್ಷದ ಅಜ್ಜಿಯನ್ನು ಕೈಗಾಡಿಯಲ್ಲಿ ಕರೆದುಕೊಂಡು ಚಂದಂಕಿಯಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ತಲುಪಿಸಿರುವ ಘಟನೆಯ ವಿಡಿಯೋ ವೈರಲ್ ಆಗ್ತಿದೆ.
ಎಂಟು ವರ್ಷದ ಸೂರಜ್ ಎಂಬ ಬಾಲಕ ಚಂದಂಕಿಯಾರಿನ ಬಗನ್ ತೋಲ ನಿವಾಸಿಯಾದ ತನ್ನ ಅಜ್ಜಿ ಮಾರೂರ ದೇವಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದು, ಅಜ್ಜಿಯ ಯಾತನೆ ನೋಡಲಾಗದೆ ಅವಳನ್ನು ತಾನೇ ಆಸ್ಪತ್ರೆಗೆ ಕರೆದೊಯ್ದನು.
ಈ ಘಟನೆಯ ವೀಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ವಿಡಿಯೋದಲ್ಲಿ, ಸೂರಜ್ ಕೈಗಾಡಿಯನ್ನು ಎಳೆದುಕೊಂಡು ಹೋಗುತ್ತಿದ್ದು, ಗಾಡಿಯ ಮೇಲೆ ಅಜ್ಜಿ ಹೊದಿಕೆಯೊಳಗೆ ಮಲಗಿರುವುದನ್ನು ನೋಡಬಹುದು.
वाह रे झारखंड की सरकार, एंबुलेंस नहीं मिली तो बुजुर्ग दादी को ठेले पर रखकर अस्पताल पहुंचा 10 साल का मासूम. वीडियो सामने आने के बाद जवाबदेही से बचने का प्रयास कर रहा है विभाग. इस महीने रोज सामने आए एंबुलेंस नहीं मिलने पर मरीज को ठेले और खटिया पर ढोने के मामले pic.twitter.com/hS09nErQNY
— सौरभ सिंह (@jsaurabhsingh) December 17, 2022
ಬೊಕಾರೊದ ಮುಖ್ಯ ವೈದ್ಯಾಧಿಕಾರಿ ಡಾ.ಎಚ್.ಕೆ.ಮಿಶ್ರಾ ಮಾತನಾಡಿ, ಹೆಚ್ಚಿನ ಆಂಬ್ಯುಲೆನ್ಸ್ಗಳು ಸೇವೆಯಿಂದ ಹೊರಗುಳಿದಿರುವುದರಿಂದ ರಾಜ್ಯದ ವೈದ್ಯಕೀಯ ಪರಿಸ್ಥಿತಿ ಹದಗೆಟ್ಟಿದೆ. ಇನ್ಮುಂದೆ 108 ಆಂಬ್ಯುಲೆನ್ಸ್ಗಳು ಸುಲಭವಾಗಿ ಲಭ್ಯವಿರುತ್ತವೆ ಎಂದು ಅವರು ಖಚಿತಪಡಿಸಿದ್ದಾರೆ.
BIG NEWS : ಮಸ್ಕ್ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?
WATCH VIDEO: ಡ್ರೈವಿಂಗ್ ಕಲಿಯುವಾಗ ಮೂವರು ಮಕ್ಕಳಿಗೆ ಕಾರು ಡಿಕ್ಕಿ… ಅಪಘಾತದ ಭಯಾನಕ ವಿಡಿಯೋ ವೈರಲ್
WATCH VIDEO: ಡ್ರೈವಿಂಗ್ ಕಲಿಯುವಾಗ ಮೂವರು ಮಕ್ಕಳಿಗೆ ಕಾರು ಡಿಕ್ಕಿ… ಅಪಘಾತದ ಭಯಾನಕ ವಿಡಿಯೋ ವೈರಲ್
BIG NEWS : ಮಸ್ಕ್ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?